Uncategorized

ಕುಮಟಾ : ಕಡ್ಲೆ ಕಡಲ ತೀರದಲ್ಲಿ ಮೂರಿಯಾ ಮೀನಿನ ಕಳೇಬರ ಪತ್ತೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಕಡಲ ತೀರದಲ್ಲಿ ಅಪರೂಪದ ಮೂರಿಯಾ (ಮೂರ್ಯಾ) ಮೀನಿನ ಕಳೇಬರ ಪತ್ತೆಯಾಗಿದೆ.ಈ ಮೀನು ಸುಮಾರು 2 ಮೀಟರ್ ಉದ್ದವಿದ್ದು,20 ಕೆ.ಜಿ ತೂಕವಿದೆ.

ಗೋಬ್ರಿಯಾ ಮೀನು ಎಂದೂ ಕರೆಯಲ್ಪಡುವ ಇದು ಚಂಡಮಾರುತ ಅಪ್ಪಳಿಸಿದ ಪರಿಣಾಮ ದಡಕ್ಕೆ ಅಪ್ಪಳಿಸಿರಬಹುದು.ಅಥವಾ ಸಮುದ್ರದಾಳದಲ್ಲಿ ಆಮ್ಲಜನಕ ಕೊರತೆ ಉಂಟಾಗಿ ದಡಕ್ಕೆ ಬಂದು ಸತ್ತಿರಲೂಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಮಾತ್ರ ಕಂಡುಬರುವ ಈ ಮೀನು ದೇಹದ ಶೇ.25ರಷ್ಟು ಭಾಗ ಇದರ ಬಾಯಿ ಇರುತ್ತದೆ.ಜೊತೆಗೆ ಹಲ್ಲುಗಳಿರುವುದರಿಂದ ಈ ಮೀನುಗಳ ದಾಳಿಗೆ ಸಿಕ್ಕರೆ ಗಂಭೀರ ಸ್ವರೂಪದ ಗಾಯ ಮಾಡುವ ಸಾಮರ್ಥ್ಯ ಇದೆ ಎಂಬುದು ಮೀನುಗಾರರ ಅಭಿಪ್ರಾಯವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮೀನಿನ ಮಾಂಸಕ್ಕೆ ಬಹಳ ಬೇಡಿಕೆ ಇದೆ.ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಮಾಂಸಕ್ಕೆ 400 ರಿಂದ 500 ರೂಪಾಯಿವರೆಗೂ ದರವಿದೆ.

Related Articles

Leave a Reply

Your email address will not be published.

Back to top button