Uncategorized
ಪುನೀತ್ ರಾಜಕುಮಾರ್ ಅವರಿಗೆ ಬೆಳಗಾವಿ ಅಭಿಮಾನಿಗಳಿಂದ ಶ್ರದ್ಧಾಂಜಲಿ
ಬೆಳಗಾವಿ: ಜಿಲ್ಲೆಯ ಪುನೀತ್ ರಾಜಕುಮಾರ್ ದುಃಖತಪ್ತ ಅಭಿಮಾನಿಗಳು ಇಂದು ಬೆಳಗಾವಿ ನಗರದ ಚೆನ್ನಮ್ಮಾ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು
ಕನ್ನಡ ಚಿತ್ರ ರಂಗದ ಮೇರು ನಟರಾಗಿದ್ದ ಪುನೀತ್ ರಾಜಕುಮಾರ ಗಡಿ ನಾಡು ಬೆಳಗಾವಿಯಲ್ಲಿ ಅಪಾರ ಅಭಿಮಾಣಿಗಳನ್ನ ಹೊಂದಿದ್ದಾರೆ, ಪವರ್ ಸ್ಟಾರ್ ಅಗಲಿಕೆಯಿಂದ ಸಾಕಷ್ಟು ನೊಂದಿರುವ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಹೂವುಗಳನ್ನ ಅರ್ಪಿಸಿ ಪವರ್ ಸ್ಟಾರ್ ನನ್ನು ನೆನದು ಕಣ್ಣೀರು ಹಾಕಿದರು
ಬೆಳಗಾವಿ ನಿತಿನ್ ,ಕೃಷ್ಣಾ ಅಪ್ಪು, ರಾಕೇಶ್ ಹೆಗಡೆ ,ಪ್ರಕಾಶ ಕುರಗುಂದ,ಶಿವಪ್ಪ, ಪ್ರವೀಣ್ ಕೋಲ್ಕರ್ ಸೇರಿದಂತೆ ಅನೇಕ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದು ಪವರ್ ಸ್ಟಾರ್ ಗೆ ಜೈ ಕಾರ ಹಾಕಿ ನಮ್ಮೊಂದಿಗೆ ಅಮರರಾಗಿದ್ದಾರೆ ಎಂದು ಹೇಳಿದರು