Uncategorized
ಕುಮಟಾ : ಮಿರ್ಜಾನ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ
ಕಾರವಾರ : ಕುಮಟಾ ತಾಲೂಕಿನ ಮಿರ್ಜಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇಂದು ಆಕಸ್ಮಿಕವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಶಿಕ್ಷಕ ದತ್ತಾತ್ರೇಯ ಪಂಡಿತ ಅವರ ವರ್ಗ ಕೋಣೆಗೆ ಹೋಗಿ ಅವರ ಇಂಗ್ಲೀಷ್ ಪಾಠದ ಕಲಿಕೆಯನ್ನು ಗಮನಿಸಿ ಪ್ರಶಂಸಿದರು.
ಮಿರ್ಜಾನದಲ್ಲಿ ಮಾದರಿ ಶಾಲೆ ನಿರ್ಮಾಣ ಮಾಡಬೇಕೆಂದು ಪಣ ತೊಟ್ಟಿರುವ ಶಾಸಕ ದಿನಕರ ಶೆಟ್ಟಿ ಅವರು ಮಾದರಿ ಶಾಲೆ ನಿರ್ಮಾಣದ ಬಗ್ಗೆ ಸಚಿವರ ಗಮನ ಸೆಳೆದರು.
ಡಿಡಿಪಿಐ ಹರೀಶ್ ಗಾವಂಕಾರ, ಡಯಟ್ ಪ್ರಾಂಶುಪಾಲರಾದ ಈಶ್ವರ ನಾಯ್ಕ, ಬಿಇಓ ರಾಜೇಂದ್ರ ಭಟ್ಟ, ಬಿಆರ್ ಸಿ ಸಮನ್ವಯಾಧಿಕಾರಿ ಶ್ರೀಮತಿ ರೇಖಾ ನಾಯ್ಕ, ಮುಖ್ಯ ಶಿಕ್ಷಕ ಎಂ.ವಿ.ವಾರೇಕರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯ್ಕ, ರಾಮನಾಥ ನಾಯ್ಕ, ಮಂಜುನಾಥ ನಾಯ್ಕ,ಮುಂತಾದವರು ಇದ್ದರು.