Uncategorized
ಮೈಸೂರು: ಗಾಳಿ ಮಳೆಗೆ ಪೆಟ್ರೋಲ್ ಬಂಕ್ ಮೇಲ್ಚಾವಣಿ ಕುಸಿತ
ಮೈಸೂರು: ಧಾರಾಕಾರ ಮಳೆ ಮತ್ತು ಗಾಳಿಗೆ ಪ್ರೆಟ್ರೋಲ್ ಬಂಕ್ ಚಾವಣಿ ಕುಸಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ವಿಜಯ ಬ್ಯಾಂಕ್ ಸರ್ಕಲ್ ಬಳಿಯ ವಿಶ್ವ ಮಾನವ ಜೋಡಿ ರಸ್ತೆ ಬಳಿರುವ ಪೆಟ್ರೋಲ್ ಬಂಕ್ ನ ಮೇಲ್ಚಾವಣಿ ಕುಸಿದಿದೆ. ಅದೃಷ್ಟವಶಾತ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದಲ್ಲದೇ ರಾತ್ರಿ ಸುರಿದ ಬಾರಿ ಮಳೆಯಿಂದ ನಗರದ ಹಲವು ಕಡೆಗಳಲ್ಲಿ ನೀರು ರಸ್ತೆಗಳಲ್ಲಿ ತುಂಬಿ ತುಳುಕಿತ್ತು. ಅಶೋಕ ರಸ್ತೆ, ದೊಡ್ಡ ಗಡಿಯಾದ ವೃತ್ತದಲ್ಲಿ ಮಳೆ ನೀರಿಗೆ ದ್ವಿಚಕ್ರ ವಾಹನಗಳು ನೀರಿಗೆ ಮುಳುಗಿದ್ದವು. ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಇಷ್ಟೇ ಅಲ್ಲದೇ ಮೈಸೂರು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಆದ್ರೆ ಈಗ ಹಿಂಗಾರುವಿನಲ್ಲಿ ಮಳೆಯಾಗುತ್ತಿದ್ದು, ರೈತರ ಬೆಳೆಗಳು ಕೊಯ್ಲಿಗೆ ಬಂದಿದೆ. ಇಂತಹ ಸಮಯದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ.