Uncategorized

ಹಳ್ಳದಲ್ಲಿ ಕೊಚ್ಚಿ ಹೋದ ಎತ್ತು: ಸ್ಥಳೀಯರು ಯತ್ನಿಸಿದರೂ ಬದುಕಲಿಲ್ಲ ಮೂಕಜೀವ…!

ದಾವಣಗೆರೆ: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟ, ಸಾವು ನೋವು ಸಂಭವಿಸಿದ್ದರೆ ಮತ್ತೊಂದೆಡೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಸದ್ಯಕ್ಕೆ ಮಳೆ‌‌ ನಿಂತಿದೆ. ಪ್ರವಾಹ ಭೀತಿಯೂ ಕರಗುತ್ತಿದೆ. ಆದ್ರೆ ಹಳ್ಳ‌ಕೊಳ್ಳಗಳು ಇನ್ನು ರಭಸವಾಗಿ ಹರಿಯುತ್ತಿವೆ.

ಕಳೆದ ನಾಲ್ಕು ದಿನಗಳಿಂದ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಎತ್ತು ಕೊಚ್ಚಿ ಹೋದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ “ತುಂಬ” ಹಳ್ಳದಲ್ಲಿ ನಡೆದಿದೆ‌

ಇಂದು ಎತ್ತುಗಳಿಗೆ ನೀರು ಕುಡಿಸಲು ಹೋದ ಸಂದರ್ಭದಲ್ಲಿ ಒಂದು ಎತ್ತು ನೀರಿನಲ್ಲಿ ಕೊಚ್ಚಿ ಹೋಗಿದೆ. ಎತ್ತು ರಕ್ಷಣೆ ಮಾಡಲು ಗ್ರಾಮಸ್ಥರು ಹರಸಾಹಸಪಟ್ಟರು. ಆದ್ರೂ ಸಹ ಎತ್ತು ಬದುಕುಳಿಯಲಿಲ್ಲ. ಒಂದು ಗಂಟೆ ನಂತರ ಎತ್ತಿನ ಕಳೆಬರಹ ಪತ್ತೆಯಾಗಿದೆ. ಪರಪ್ಪ ಎಂಬ ರೈತನಿಗೆ ಸೇರಿದ 45 ಸಾವಿರ ಮೌಲ್ಯದ ಎತ್ತು ಇದಾಗಿದೆ. ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Related Articles

Leave a Reply

Your email address will not be published.

Back to top button