Uncategorized

ಕಾಲುವೆಯಲ್ಲಿ ಕೊಚ್ಚಿ ಹೋದ ವ್ಯಕ್ತಿ ನಾಪತ್ತೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರುಣ ಅವಾಂತರ ಸೃಷ್ಟಿಸಿದ್ದಾನೆ. ಪಕ್ಕದ ಮನೆಗೆ ನೀರು ನುಗ್ತಿದೆ ಅಂತಾ ಕೇಳಿಕೊಂಡಿದ್ದಕ್ಕೆ, ನೀರು ಬರದಂತೆ ತಪ್ಪಿಸಲು ಹೊರಬಂದ ವ್ಯಕ್ತಿ ವಾಪಸ್ ಮನೆಗೆ ಬರಲೇ ಇಲ್ಲ. ಪತ್ನಿಯ ಕಣ್ಣೇದುರೇ ಪತಿ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಎಷ್ಟು ಹುಡುಕಿದ್ರೂ ನಾಪತ್ತೆಯಾದವನ ಸುಳಿವು ಮಾತ್ರ ಸಿಕ್ಕಿಲ್ಲ..

ತಡರಾತ್ರಿ ಸುರಿದ ಧಾರಾಕಾರ ಮಳೆ‌ಗೆ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಯಲ್ಲಿ ಕಸ ತೆಗೆಯಲು ಸಹಾಯ ಮಾಡಿ ಅಂತಾ ಪಕ್ಕದ ಮನೆಯವ್ರು ಕೇಳಿದ್ದಕ್ಕೆ ಈ ಚಂದ್ರೇಗೌಡ ಹೊರ ಹೋಗಿದ್ದಾರೆ. ಈ ವೇಳೆ ಕಾಲುವೆ ವೀಕ್ಷಿಸುತ್ತಿದ್ದಾಗ ಪಕ್ಕದಲ್ಲಿಯೇ ಇದ್ದ ಕಾಲುವೆಗೆ ಕಾಲು ಜಾರಿ ಬಿದ್ದಿದ್ದಾರೆ.

ಮೈಸೂರು ನಗರದ ಸಿದ್ದಾರ್ಥ ಬಡಾವಣೆಯ ವಿನಯ ಮಾರ್ಗದ ನಿವಾಸಿ ಚಂದ್ರೇಗೌಡ ಕಾಲುಜಾರಿ ಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದಾರೆ. ಮೆಸ್ ನಡೆಸಿಕೊಂಡು ಮನೆಯಲ್ಲಿ ತನ್ನ ಪತ್ನಿ ಮಹಾಲಕ್ಷ್ಮಿ ಜೊತೆ ವಾಸವಿದ್ರು. ತಡರಾತ್ರಿ ಮೈಸೂರಿನಲ್ಲಿ ಸುರಿದ ಮಳೆ ಯಮಸ್ವರೂಪಿಗಿದೆ.

ಮೈಸೂರು ನಗರದಲ್ಲಿನ ವಿಸ್ತಾರವಾದ ಕಾರಂಜಿ ಕೆರೆಯಲ್ಲಿ ತೆಪ್ಪದ ಮೂಲಕ ರಕ್ಷಣಾ ಸಿಬ್ಬಂದಿ ಹುಡುಕಾಡಿದ್ದಾರೆ. ಇತ್ತ ಪತಿ ಕಳೆದುಕೊಂಡ ಪತ್ನಿ ಮಹಾಲಕ್ಷ್ಮಿ ಕಂಗಾಲಾಗಿದ್ದಾರೆ.

ಪತ್ನಿ ಮಹಾಲಕ್ಷ್ಮಿ ನೋಡ ನೋಡುತ್ತಿದ್ದಂತೆ ಪತಿ ಚಂದ್ರೇಗೌಡ ಕಾಲುವೆಯಲ್ಲಿ ಬೋರ್ಗರೆದು ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಇದೇ ವೇಳೆ ಅಗ್ಗ ತನ್ನಿ ಅಂತಾ ಪಕ್ಕದ ಮನೆಯವ್ರನ್ನ ಕೂಗುವಷ್ಟದಲ್ಲಿ ಪತಿ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದಾನೆ.

ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ವಿಷಯ ಮುಟ್ಟಿಸಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಕಾಲುವೆ ಮೂಲಕ ಹುಡುಕಿದ್ರೂ ನೀರಿನಲ್ಲಿ ಕೊಚ್ಚಿಹೋದ ಚಂದ್ರೇಗೌಡ ಮಾತ್ರ ಪತ್ತೆಯಾಗಿಲ್ಲ. ಬೆಳಿಗ್ಗೆಯೂ ಕಾಲುವೆ ನೀರು ಹರಿದು ಸೇರುವ ಕಾರಂಜಿಕೆರೆಯಲ್ಲಿ ತೆಪ್ಪದ ಮೂಲಕ ಹುಡುಕಿದ್ರೂ ನಾಪತ್ತೆಯಾಗಿದ್ದಾರೆ. ಚಂದ್ರೇಗೌಡ ಗುರುತು ಮಾತ್ರ ಪತ್ತೆಯಾಗಿಲ್ಲ.

ಒಟ್ಟಿನಲ್ಲಿ ಪಕ್ಕದ ಮನೆಯವ್ರಿಗೆ ಹೆಲ್ಪ್ ಮಾಡೋಕೆ ಅಂತಾ ಹೋಗಿ ನೀರಿನಲ್ಲಿ ಕೊಚ್ಚಿಹೋಗಿದ್ದು ಮಾತ್ರ ವಿಪರ್ಯಾಸ.

Related Articles

Leave a Reply

Your email address will not be published.

Back to top button