ಧಾರವಾಡ: ಭಾರಿ ಮಳೆಯಿಂದ ಕುಂದಗೋಳದಲ್ಲಿ ಮನೆ ಗೋಡೆ ಕುಸಿತ
ಧಾರವಾಡ : ಕಳೆದ ದಿನ ಸೇರಿದಂತೆ ಈ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಮನೆಗೋಡೆ ನೆನೆದು ಕುಸಿದಿರುವ ಘಟನೆ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿಯಲ್ಲಿ ನಡೆದಿದೆ.
ತಾಲೂಕಿನ ಸಂಶಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಮಾದೇವಿ ಶೇಖಪ್ಪ ಕ್ಯಾಲಕೊಂಡ್ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದು ಅವಘಡ ಸಂಭವಿಸಿದೆ. ಕಳೆದಿನ ಸುರಿದ ಮಳೆಯಿಂದಾಗಿ ಮನೆ ಸಂಪೂರ್ಣ ಜಲಾವೃತವಾಗೊಂಡಿತ್ತು. ತಡ ರಾತ್ರಿಯವರೆಗೂ ಮನೆಯ ಕುಟುಂಬಸ್ಥರು ನೀರನ್ನು ಹೊರಹಾಕಲು ಹರಸಾಹಾಸ ಪಟ್ಟಿದ್ದರು. ಆದರೆ ಇಂದು ಮನೆ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವುಸಿಲ್ಲ.
ಇನ್ನೂ ಏಕಾಏಕಿ ಮಳೆ ನೀರು ಮನೆಗೆ ನುಗ್ಗಿದ್ದು, ಇದರಿಂದಾಗಿ ಮನೆಯಯಲ್ಲಿರುವ ಸಾಮಗ್ರಿಗಳಿಗೆ ಹಾನಿ ಉಂಟಾಗಿದೆ. ಮತ್ತೆ ಗೋಡೆ ಕುಸಿತದಲ್ಲಿ ಹಲವು ಸಾಮಗ್ರಿಗಳು ಸಿಲ್ಲುಕಿಕೊಂಡಿವೆ. ಸದ್ಯ ಬಿದ್ದಿರುವ ಗೋಡೆ ಹಾಗೂ ಮನೆಯ ಸಾಮಾನುಗಳನ್ನು ಕುಟುಂಬಸ್ಥರು ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.
ಅಲ್ಲದೆ ಮೊದಲೇ ನಾವು ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಈಗ ಮಳೆಯಿಂದಾಗಿ ಮನೆಗೋಡೆ ಕೂಡಾ ಕುಸಿದು ಬಿದಿದ್ದೆ. ಹಾಗಾಗಿ ಮುಂದೆ ಮನೆ ನಿರ್ಮಿಸಿಕೊಳ್ಳುವುದು ಗೇಗೆ ಎಂಬ ಚಿಂತೆ ನಮ್ಮಲ್ಲಿ ಕಾಡುತ್ತಿದೆ. ಆದರಿಂದ ಸರ್ಕಾರ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ಮಾದೇವಿ ಶೇಖಪ್ಪ ಕ್ಯಾಲಕೊಂಡರವರು ಮನವಿ ಮಾಡಿದ್ದಾರೆ