ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ನಿಷ್ಕ್ರಿಯ; ರೋಗಿಗಳಿಗೆ ತೊಂದರೆ
ಚಿಕ್ಕಮಗಳೂರು: ಎಂಜಿಎಂ ಸರ್ಕಾರಿ ಆಸ್ಪತ್ರೆ ಮೂಡಿಗೆರೆಯಲ್ಲಿ ಡಯಾಲಿಸಿಸ್ ಘಟಕದ ಯಂತ್ರ ನಿಷ್ಕ್ರಿಯಗೊಂಡಿದ್ದು,ಕಳೆದ ಎರಡು ವಾರಗಳಿಂದ ಹಲವು ರೋಗಿಗಳಿಗೆ ತೊಂದರೆ ಉಂಟಾಗಿದೆ.
ಎಂಜಿಎಂ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಎರಡು ಯಂತ್ರಗಳಿದ್ದು, ಒಂದು ಯಂತ್ರ ತಾಂತ್ರಿಕ ದೋಷದಿಂದ ನಿಷ್ಕ್ರಿಯಗೊಂಡಿದೆ. ಇದುವರೆಗೂ ದುರಸ್ತಿಯಾಗಿಲ್ಲ. ಈಗ ಒಂದೇ ಯಂತ್ರ ಚಾಲ್ತಿಯಲ್ಲಿರುವ ಪರಿಣಾಮ ವಾರಕ್ಕೆ ಎರಡು-ಮೂರು ಡಯಾಲಿಸಿಸ್ ಮಾಡಿಸುವವರಿಗೆ ಕೇವಲ ವಾರಕ್ಕೊಂದು ಡಯಾಲಿಸಿಸ್ ನೀಡುತ್ತಿದ್ದಾರೆ.
ರೋಗಿಗಳು ದೇಹದಲ್ಲಿ ನೀರು ಹಾಗೂ ಇತರೆ ತ್ಯಾಜ್ಯಗಳು ಹೊರಹೋಗದೆ ಶ್ವಾಸಕೋಶದಲ್ಲಿ ನೀರು ತುಂಬಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ 18ಕ್ಕೂ ಹೆಚ್ಚು ರೋಗಿಗಳಿಗೆ ಇದರಿಂದ ತೊಂದರೆಯಾಗಿದೆ. ಸ್ಥಳೀಯ ಶಾಸಕರು ಇದರತ್ತ ಗಮನಹರಿಸಿ ತಕ್ಷಣ ಡಯಾಲಿಸಿಸ್ ಯಂತ್ರವನ್ನು ಸರಿಪಡಿಸುವಂತೆ ಸ್ಥಳೀಯರು ವಿವಿಧ ಸಂಘ ಸಂಸ್ಥೆಗಳು ಆಗ್ರಹಿಸಿವೆ.
ಡಯಾಲಿಸಿಸ್ ಘಟಕಗಳ ನಿರ್ವಹಣೆಯನ್ನು ಸರ್ಕಾರ ಖಾಸಗಿ ಸಂಸ್ಥೆಗಳಿಗೆ ವಹಿಸಿದೆ. ಆದರೆ ಘಟಕದ ಸಿಬ್ಬಂದಿಗಳಿಗೆ ನಾಲ್ಕು ತಿಂಗಳುಗಳಿಂದ ವೇತನ ಪಾವತಿಯಾಗದ ಕಾರಣ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ದೇನೆ. ಶೀಘ್ರವೇ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ”
-ಎಂ ಪಿ ಕುಮಾರಸ್ವಾಮಿ, ಶಾಸಕ
“ಡಯಾಲಿಸಿಸ್ ಘಟಕದ ಒಂದು ಯಂತ್ರ ನಿಷ್ಕ್ರಿಯಗೊಂಡಿದ್ದು, ರೋಗಿಗಳಿಗೆ ತೊಂದರೆಯಾಗುತ್ತಿದೆ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಂತ್ರದ ದುರಸ್ತಿಪಡಿಸಲಾಗುವುದು”
-ಡಾ. ಶಾಂಭವಿ ವೈದ್ಯಾಧಿಕಾರಿ