Uncategorized

ಧಾರವಾಡ: 6ನೇ ತರಗತಿಯ ವಿದ್ಯಾರ್ಥಿಗೆ ಒಲಿದು ಬಂದ ಡಾಕ್ಟರೇಟ್ ಪದವಿ

ಧಾರವಾಡ: ಚಿಕ್ಕ ವಯಸ್ಸಿನಲ್ಲಿ ಬಹುತೇಕ‌‌ ಮಕ್ಕಳು ಹೆಚ್ಚು ಆಟದ ಕಡೆ ಗಮನ ಹರಿಸುತ್ತಾರೆ. ಇನ್ನೂ ಕೆಲವು ಮಕ್ಕಳು ತಾಯಿ ಹಾಗೂ ತಂದೆಯೊಂದಿಗೆ ಹೆಚ್ಚು ಸಮಯ ಕಳೆಯೋದನ್ನು ನಾವು ನೀವು ನೋಡೇ ಇರ್ತೇವಿ. ಆದರೆ ಈ ಬಾಲಕ ತಂದೆ ತಾಯಿಯೊಂದಿಗೆ ಸಮಯ ಕಳೆಯುವುತ್ತಾ ಅವರ ಮಾರ್ಗದರ್ಶನದಲ್ಲಿ ವಿಶೇಷ ಸಾಧನೆ ಮಾಡಿದ್ದಾನೆ. ತನ್ನ ವಿಶೇಷ ಜ್ಞಾನದಿಂದಲ್ಲೇ ಕರ್ನಾಟಕ ಅಚೀವರ್ ಬುಕ್ ಆಫ್​ ರೆಕಾರ್ಡ್​ನಲ್ಲಿ ಹೆಸರು ದಾಖಲು ಮಾಡಿಕೊಂಡಿದ್ದು, ಇದರ ಜೊತೆಗೆ ಈಗ ಬಾಲಕ ಸಾಧನೆ ನೋಡಿದ ತಮಿಳುನಾಡು ಮೂಲದ ಯೂನಿವರ್ಸಿಟಿಯ ಡಾಕ್ಟರೇಟ್ ಘೋಷಣೆ ಮಾಡಿದೆ, ಇದರೊಂದಿಗೆ ಈ ಬಾಲಕ ಈಗ ಅನೇಕ ಮಕ್ಕಳ ಸಾಧನೆಗೆ ಸ್ಪೂರ್ತಿಯಾಗಿ ನಿಂತಿದ್ದಾನೆ.

ಧಾರವಾಡದ ಬೇಂದ್ರೆ ನಗರದ ನಿವಾಸಿಯಾಗಿರುವ ಜ್ಯೋತಿ ಮಹೇಶ್ ಪ್ರಸಾದ್ ಹಾಗೂ ಮಹೇಶ್ ಪ್ರಸಾದ್ ದಂಪತಿಗಳ ಏಕೈಕ ಪುತ್ರ ಸಮರ್ಥ್ ಪ್ರಸಾದನೇ ವಿಶೇಷ ಸಾಧನೆ ಮಾಡಿದ ಬಾಲಕನಾಗಿದ್ದಾನೆ. ಈಗಿನ್ನೂ 11 ವರ್ಷದ ಬಾಲಕನಾಗಿದ್ದು, ಧಾರವಾಡದ ಗ್ಲೋಬಲ್ ಆಫ್ ಎಕ್ಸ್​​ಲೆನ್ಸ್ ಸ್ಕೂಲ್​ನಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲಾ ವಿದ್ಯಾಭ್ಯಾಸದ ಜೊತೆ ಜೊತೆಗೆ ಪ್ರತಿದಿನ ಒಂದು ಗಂಟೆ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಓದುತ್ತಾನೆ. ಚಿಕ್ಕ ವಯಸ್ಸಿನಲ್ಲೆ ಆಗಾಧ ನೆನಪಿನ ಶಕ್ತಿ ಹಾಗೂ ಜ್ಞಾನ ಹೊಂದಿದ್ದು, ಕೇವಲ 10 ನಿಮಿಷದಲ್ಲಿ ಒಂದು ನೂರಾ ಹತ್ತು ಸಂಸ್ಕೃತ ಶ್ಲೋಕಗಳನ್ನು ಹೇಳುವ ಮೂಲಕ ದೊಡ್ಡವರನ್ನು ಕೂಡಾ ಒಂದು ಕ್ಷಣ ತನ್ನೆಡೆಗೆ ತಿರುಗಿ ನೋಡುವಂತೆ ಮಾಡುತ್ತಿದ್ದಾನೆ.

ಸಾಮನ್ಯ ಜ್ಞಾನದ 1 ಸಾವಿರ 1ನೂರು ಪ್ರಶ್ನೆಗಳಿಗೆ ಫಟಾ ಫಟ್​ ಉತ್ತರಿಸುವ ಮೂಲಕ ಈಗಾಗಲೇ ಕರ್ನಾಟಕ ಅಚೀವರ್ ಬುಕ್ ಆಫ್​ ರೆಕಾರ್ಡ್​, ಎಕ್ಸಲುಸಿವ್ ವರ್ಲ್ಡ್ ರೆಕಾರ್ಡ್, ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೆರಿಸಿಕೊಂಡಿದ್ದಾನೆ. ಇದರ ಜೊತೆಗೆ ಈಗ ಮಗುವಿನ ನೆನಪಿನ ಶಕ್ತಿ ಹಾಗೂ ಆಗಾಧ ಜ್ಞಾನವನ್ನು ಗುರಿತಿಸಿ ತಮಿಳುನಾಡಿನ ಯುನಿವರ್ಸಲ್ ಯುನಿವರ್ಸಿಟಿಯು ಡಾಕ್ಟರೇಟ್‌ನ್ನು ಘೋಷಣೆ ಮಾಡಿದ್ದು, ಇದೇ ಅಕ್ಟೋಬರ್ 15 ರಂದು ಸಮರ್ಥ ಡಾಕ್ಟರೇಟ್‌ನ್ನು ಪಡೆದುಕೊಳ್ಳಲ್ಲಿದ್ದಾನೆ.

ಇನ್ನೂ ಈ ಕುರಿತು ಬಾಲಕನ ತಾಯಿ ಜ್ಯೋತಿ ಮಹೇಶ ಪ್ರಸಾದ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಈತನಿಗೆ ವಿಶೇಷ ಜ್ಞಾನ ಇರುವುದು ಗಮನಕ್ಕೆ ಬಂದಿದೆ. ಆವಾಗಿನಿಂದಲೇ ಮಗನ ಆಸಕ್ತಿನೋಡಿ, ಆತನಿಗೆ ಸಾಮಾನ್ಯ ಜ್ಞಾನದ ಕುರಿತು ಪ್ರಶ್ನೆ ಕೇಳೋದು ಮಾಡುತ್ತಾ ಬರುತ್ತಿದ್ದೇವೆ. ಸಾಮನ್ಯ ವಿಷಯಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲು ಕೂಡಾ ಪ್ರಾರಂಭ ಮಾಡಲಾಗಿತ್ತು. ಹಾಗಾಗಿ ನನ್ನ ಮಗ ಇಂದು ಈ ಮಟ್ಟದ ಸಾಧನೆ ಮಾಡುತ್ತಿದ್ದಾನೆ. ಸಾಧನೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೆನೆ ಎಂದು ತಮ್ಮ ಏಕೈಕ ಪುತ್ರ ಸಮರ್ಥ ಕುರಿತು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

ಒಟ್ಟಿನಲ್ಲಿ ತನ್ನ 11 ನೇ ವಯಸ್ಸಿನಲ್ಲಿ ಆಗಾಧ ಸಾಧನೆ ಮಾಡಿರುವ ಈ ಬಾಲಕ ಈಗ ಹಲವು ಮಕ್ಕಳಿಗೆ ಮಾದರಿಯಾಗಿ ನಿಂತಿದ್ದಾನೆ. ಪ್ರತಿಯೊಂದು ಮಕ್ಕಳಲ್ಲಿ ಒಂದೊಂದು ವಿಶೇಷ ಜ್ಞಾನ ಇದೇ ಇರುತ್ತದೆ. ಆದರೆ ಅದನ್ನು ಗುರುತ್ತಿಸಿ, ಅದಕ್ಕೆ ಬೇಕಾದ ಅಗತ್ಯ ತರಬೇತಿ ನೀಡಿದ್ದಲ್ಲಿ, ಎಲ್ಲರ ಮಕ್ಕಳು ಕೂಡಾ ಸಾಧನೆ ಹಾದಿಯಲ್ಲಿ ನಿಲ್ಲುತ್ತಾರೆ ಎಂಬುವುದುನ್ನು ಜ್ಯೋತಿ ಹಾಗೂ ಮಹೇಶ್ ಪ್ರಸಾದ್ ದಂಪತಿಗಳು ತೋರಿಸಿಕೊಟ್ಟಿದ್ದಾರೆ.

Related Articles

Leave a Reply

Your email address will not be published.

Back to top button