Uncategorized

ಟಗ್‌ನೊಳಗೆ ಪ್ರೇತದ ಕಾಟ? ಕಡಲ ತೀರದ ಜನ ಆತಂಕ

ಉಡುಪಿ: ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ಚಂಡಮಾರುತದಿಂದ ದುರಂತಕ್ಕೀಡಾದ ಟಗ್‌ನೊಳಗೆ ಪ್ರೇತದ ಕಾಟ.? ಕಡಲ ತೀರದ ಜನರಲ್ಲಿ ಇದೀಗ ಆತಂಕ ಮನೆಮಾಡಿದೆ.

ಉಡುಪಿ ಪಡುಬಿದ್ರಿ ಕಾಡಿಪಟ್ಣದ ಕಡಲ ತೀರದ ಪ್ರದೇಶಗಳಲ್ಲಿ ಜೋರಾಗಿ ಪೇತ ಕಾಟ ಕಾಣಿಸಿಕೊಂಡಿದೆ ಮತ್ತು ಇದಕ್ಕೆ ಕಾರಣ ಏನೆಂದು ತಿಳಿದರೆ ನೀವು ಶಾಕ್ ಆಗ್ತೀರಾ ಕಳೆದ ವರ್ಷ ತೌಕ್ತೆ ಚಂಡಮಾರುತಕ್ಕೆ ಸಿಲುಕಿ ದುರಂತಕ್ಕೀಡಾಗಿ ಕಾಡಿಪಟ್ಣದ ಕಡಲ ತೀರದಲ್ಲಿ ಟಗ್ ಬಿದ್ದಿತ್ತು ಮತ್ತು ಕಡಲ ತೀರಕ್ಕೆ ಬರುವ ಪ್ರವಾಸಿಗರು ಟಗ್‌ನ ಮುಂದೆ ನಿಂತು ಸೆಲ್ಫಿಯನ್ನು ತೆಗೆದುಕೊಳ್ಳುತ್ತಿದ್ದರು ಆದರೆ
ಇತ್ತೀಚೆಗೆ ಟಗ್‌‌ನ ಮುಂದೆ ಸೆಲ್ಪಿ ತೆಗೆದುಕೊಳ್ಳತ್ತಿದಾಗ ಇಬ್ಬರಿಗೆ ಟಗ್‌ ಒಳಗೆ ವ್ಯಕ್ತಿ ಚಲಿಸಿದಂತೆ ಭಾಸವಾಗಿದೆ ಎಂದು ತಿಳಿದು ಬಂದಿದೆ.

ಇದೀಗ ಭೀತಿಗೆ ಒಳಗಾದ ಯುವಕರಿಂದಾಗಿ ಊರಿನಲ್ಲಿ ಟಗ್‌ನ ಒಳಗಡೆ ಪ್ರೇತ ಇದೆ ಎನ್ನುವ ಸುದ್ದಿ ಹರಿದಾಡಲು ಶುರುವಾಗಿದೆ. ಟಗ್ ದುರಂತಕ್ಕೀಡಾದಾಗ ಎಂಟು ಮಂದಿಯಲ್ಲಿ ಮೂವರು ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ ಹಾಗೂ ನಂತರ ಇಬ್ಬರ ಮೃತದೇಹವು ಕಾರ್ಯಾಚರಣೆಯ ವೇಳೆ ಪತ್ತೆಯಾಗಿತ್ತು.

ಇನ್ನೋರ್ವನ ದೇಹವು ಇಲ್ಲಿಯ ತನಕ ಪತ್ತೆಯಾಗಿಲ್ಲ. ಹೀಗಾಗಿ ಆತನೇ ಪ್ರೇತವಾಗಿ ಕಾಡುತ್ತಿದ್ದಾನಾ ಎನ್ನುವದು ಹಲವರ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ ಸದ್ಯ ದುರಂತಕ್ಕೆ ಒಳಗಾದ ಟಗ್ ಹತ್ತಿರ ಸುಳಿಯದ ಸ್ಥಳೀಯರು ಒಂದಿಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

Related Articles

Leave a Reply

Your email address will not be published.

Back to top button