Uncategorized

ಉಪಚುನಾವಣೆಯಲ್ಲಿ‌ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಾರೆ: ಸಚಿವ ಶಂಕರ​ ಪಾಟೀಲ ಮುನೇನಕೊಪ್ಪ

ಧಾರವಾಡ: ರಾಜ್ಯದಲ್ಲಿ ನಡೆಯುತ್ತಿರುವ ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಪರ ಜನರು‌ ಒಲವು ಹೆಚ್ಚಾಗಿ ಕಂಡು ಬರುತ್ತಿದೆ.‌ ಬಿ ಎಸ್ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್​ ಸೇರಿದಂತೆ ಹಲವು ಹಿರಿಯ ನಾಯಕರು ಚುನಾವಣೆ ಪ್ರಚಾರದಲ್ಲಿ ‌ಭಾಗವಹಿಸುತ್ತಿದ್ದಾರೆ‌. ಹಾಗಾಗಿ ಎರಡು ಕ್ಷೇತ್ರದ ಉಪ ಚುನಾವಣೆಯಲ್ಲಿ ನಮ್ಮ ಪಕರಷದ ಅಭ್ಯರ್ಥಿ ಗೆಲ್ಲುತ್ತಾರೆ ಎಂದು‌ ಸಚಿವ ಶಂಕ ಪಾಟೀಲ್ ಮುನೇನಕೊಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಉತ್ತಮವಾದ ನಾಯಕತ್ವದಲ್ಲಿ ಸರ್ಕಾರ ನಡೆಸಲಾಗುತ್ತಿದೆ. ಮಾಜಿ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಪ್ರಚಾರದಲ್ಲಿ ಭಾಗಿಯಾಗಿ ನಮ್ಮ ಶಕ್ತಿಯನ್ನು ಹೆಚ್ಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲ್ಲುವು‌‌ ಪಕ್ಕಾ ಆಗಿದೆ. ಈಗಾಗಲೇ ಈ ಹಿಂದೆ ನಡೆದ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತದಾರರು ಆರ್ಶೀವಾದ ಮಾಡಿದ್ದಾರೆ. ಈಗ ಬೈ ಎಲೆಕ್ಷಣ ನಡೆಯುತ್ತಿದೆ, ಇದರಲ್ಲಿಯು ನಮ್ಮ ಅಭ್ಯರ್ಥಿಗಳಿಗೆ ಜನ ಆರ್ಶೀವಾದ ಮಾಡುತ್ತಾರೆ ಎಂದರು.

ಸದ್ಯದಲ್ಲಿಯೇ ಹು-ಧಾ ಪಾಲಿಕೆ ಮೇಯರ್, ಉಪಮೇಯರ ಆಯ್ಕೆಯಾಗುತ್ತೆ:

ಈಗಾಗಲೇ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮತದಾರರು ನಮ್ಮ ಪಕ್ಷದ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ‌ ಆರ್ಶೀವಾದ ನೀಡಿದ್ದಾರೆ. ಈಗ ಮೇಯರ್-ಉಪಮೇಯರ ಆಯ್ಕೆಗೆ ಗೆಜೆಟ್ ನೋಟಿಫಿಕೇಶನ್ ಆಗಿದೆ. ಹಾಗಾಗಿ ಅವಳಿನಗರ‌ ಪಾಲಿಕೆಗೆ ಮೇಯರ್ ಹಾಗೂ ಉಪಮೇಯರ್‌ ಆಯ್ಕೆ ಸದ್ಯದರಲ್ಲಿಯೇ ನಡೆಯುತ್ತದೆ ಎಂದು ತಿಳಿಸಿದರು.

Related Articles

Leave a Reply

Your email address will not be published.

Back to top button