Uncategorized

ಹುಬ್ಬಳ್ಳಿಯಲ್ಲಿ‌ ಕಳೆಗಟ್ಟದ ದೀಪಾವಳಿ‌ ಸಂಭ್ರಮ: ಶ್ರೀ ಸಿದ್ದಾರೂಢರ ದರ್ಶನಕ್ಕೆ ಭಕ್ತರ ದಂಡು

ಧಾರವಾಡ: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಬ್ಬವನ್ನು ವಾಣಿಜ್ಯಗರಿ ಹುಬ್ಬಳ್ಳಿಯಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾತ್ತಿದ್ದು, ನಗರದ ಎಲ್ಲ ಕಡೆಗಳಲ್ಲಿಯು ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಕಳೆಗಟ್ಟಿದೆ. ತಮ್ಮ ತಮ್ಮ ಮನೆಗಳಲ್ಲಿ ಲಕ್ಷ್ಮಿ ಪೂಜೆ, ಗೋ ಪೂಜೆ, ಹಾಗೂ ವಾಹನಗಳ ಪೂಜೆಗಳನ್ನು ಮಾಡುತ್ತಿದ್ದರೆ ಇನ್ನೂ ಕೆಲವರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ದೀಪಾವಳಿ ಹಬ್ಬದ ಹಿನ್ನೆಲೆ ಶ್ರೀ ಸಿದ್ದಾರೂಢರ ಮಠಕ್ಕೆ ಭಕ್ತರ ದಂಡು:

ಉತ್ತರ ಕರ್ನಾಟಕ ಪ್ರಸಿದ್ಧ ಮಠಗಳಲ್ಲಿ ಒಂದಾದ ನಗರದ ಹಳೇ ಹುಬ್ಬಳ್ಳಿಯ ಶ್ರೀ ಸಿದ್ದಾರೂಢರ ಮಠಕ್ಕೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಕ್ತರ ದಂಡು ಆಗಮಿಸುತ್ತಿದ್ದು, ಶ್ರೀ ಸಿದ್ದಾರೂಢರ ಮಠದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಜೊತೆಗೆ ತಮ್ಮ ತಮ್ಮ ಗೂಡ್ಸ್ ವಾಹನಗಳು ಸೇರಿದಂತೆ ದೈನದಿನ ಬಳಕೆಯ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಕೂಡಾ ತಂದು ಹಲವು ಭಕ್ತರು ಪೂಜೆಗಳನ್ನು ಮಾಡಿಸಿಕೊಳ್ಳುತ್ತಿರು ದೃಶ್ಯಗಳು‌ ಮಠದ ಆವರಣದಲ್ಲಿ ಸಾಮನ್ಯವಾಗಿ ಕಂಡು ಬರುತ್ತಿವೆ.

ದೀಪಾವಳಿ ಹಬ್ಬವನ್ನು ಹಿಂದೂ ಸಂಪ್ರದಾಯದಲ್ಲಿ ವಿಶೇಷವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಆದರೆ ಪ್ರಸಕ್ತ ವರ್ಷದ ದೀಪಾವಳಿ ಹಬ್ಬದಲ್ಲಿ ಅಗತ್ಯ ವಸ್ತಗಳ ಬೆಲೆ ಏರಿಕೆ ಸೇರಿದಂತೆ ಹಬ್ಬದ ಸಾಮಗ್ರಿಗಳ ಬೆಲೆ ಏರಿಕೆ ಬಿಸಿ ಹುಬ್ಬಳ್ಳಿಯ ಜನತೆಗೆ ಕೊಂಚ ಜೋರಾಗಿಯೇ ತಟ್ಟಿದೆ.

ಕಳೆದ ನಾಲ್ಕು ದಿನಗಳಿಂದ ನಗರದ ದುರ್ಗದ್ ಬೈಲ್ ಮಾರುಕಟ್ಟೆ, ಜನತಾ ಬಜಾರ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಹಬ್ಬದ ಸಾಮಗ್ರಿಗಳ ಮಾರಾಟಕ್ಕೆ ಹು-ಧಾ ಮಹಾನಗರ ಪಾಲಿಕೆ ವ್ಯಾಪಾರಸ್ಥರಿಗೆ ಅನುವು ಮಾಡಿಕೊಟ್ಟಿದ್ದು, ಆದರೆ ಹಬ್ಬದ ಸಾಮಗ್ರಿಗಳ ಖರೀದಿಗೆ ಬಂದ ಜನತೆಗೆ ಬೆಲೆ ಏರಿಕೆ ಶಾಕ್‌ ನೀಡಿದೆ. ಐದು ಕಬ್ಬಿಗೆ ಬೆಲೆ 100 ರೂಪಾಯಿ ಆದರೆ ಬಾಳೆ ದಿಂಡಿನ ಬೆಲೆಯು ಕೂಡಾ 130 ರೂಪಾಯಿ ಆಗಿದೆ. ಇದರ ಜೊತೆಗೆ ಹೂವುಗಳ ಬೆಲೆ ದುಪ್ಪಟ್ಟಾಗಿದ್ದು, ಹೀಗೆ ಬೆಲೆ ಏರಿಕೆಯಾದ್ರೆ ಹಬ್ಬದ ಆಚರಣೆ ಹೇಗೆ ಮಾಡೋದು ಎಂಬ ಚಿಂತೆಯಲ್ಲಿಯೇ ಜನತೆ ಮಾರುಕಟ್ಟಿಯಲ್ಲಿ ಸಾಮಗ್ರಿಗಳ ಖರೀದಿಗೆ ಮುಗಿ ಬಿದಿದ್ದಾರೆ.‌

ಒಟ್ಟಿನಲ್ಲಿ ಹಬ್ಬದ ಸಾಮಗ್ರಿಗಳ ಬೆಲೆ ಏರಿಕೆಯ ನಡುವೆಯೂ ಹುಬ್ಬಳ್ಳಿಗರೂ ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಕೆಲವರು ಕಳೆದಿನ ಅಂಗಡಿಗಳ ಪೂಜೆ ಮಾಡಿದ್ದು, ಇನ್ನು ಕೆಲವರು ಇಂದು ತಮ್ಮ ತಮ್ಮ ಶಾಪ್‌ಗಳನ್ನು ಪೂಜೆ ಮಾಡುತ್ತಿದ್ದಾರೆ. ಇದರ ಜೊತೆಗೆ ತಮ್ಮ ಗೂಡ್ಸ್ ವಾಹನ ಸೇರಿದಂತೆ ಪ್ರತಿದಿನ ಬಳಕೆ ಮಾಡುವ ವಾಹನಗಳನ್ನು ತಂದು ಮಠಗಳು, ದೇವಸ್ಥಾನಗಳಲ್ಲಿ ವಿಶೇಷವಾಗಿ ಪೂಜೆ ಮಾಡಿಸುತ್ತಿರುವುದು ವಾಣಿಜ್ಯ ನಗರಿಯಲ್ಲಿ ಕಂಡು ಬರುತ್ತಿವೆ.

Related Articles

Leave a Reply

Your email address will not be published.

Back to top button