ಏಳು ತಿಂಗಳ ಹಿಂದಷ್ಟೇ ಮದುವೆಯಾದ ಗೃಹಿಣಿ ಪ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕಲಬುರಗಿ: ಪ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದ್ದು, ಪತಿಯೇ ಪತ್ನಿ ಕೊಲೆ ಮಾಡಿ ಪ್ಯಾನಿಗೆ ನೇಣು ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ನಗರದ ಪ್ರಗತಿ ಕಾಲೋನಿಯಲ್ಲಿ ಘಟನೆ ನಡೆದಿದೆ. ಜೋತಿ (22) ಶವವಾಗಿ ಪತ್ತೆಯಾದ ಮಹಿಳೆ. ಜ್ಯೋತಿ ಏಳು ತಿಂಗಳ ಹಿಂದಷ್ಟೇ ಲೋಕೇಶ್ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಲೋಕೇಶ್ ಕೆಕೆಆರ್ ಟಿ ಸಿ ಯ ಸೇಡಂ ಡಿಪೋ ದಲ್ಲಿ ಬಸ್ ಚಾಲಕನಾಗಿದ್ದಾನೆ. ಕಲಬುರಗಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಲೋಕೇಶ್ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಪ್ಯಾನಿಗೆ ಶವ ನೇಣು ಹಾಕಿದ್ದಾನೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಹಣಕ್ಕಾಗಿ ಲೋಕೇಶ್ ಜ್ಯೋತಿಗೆ ಪೀಡಿಸುತ್ತಿದ್ದನಂತೆ. ಅಲ್ಲದೆ, ಮದುವೆ ಸಮಯದಲ್ಲಿ ವರದಕ್ಷಿಣೆ ವರೋಪಚಾರ ಕೂಡಾ ಲಿಒಕೇಶ ಪಡೆದಿದ್ದನಂತೆ. ಆದ್ರೂ ಜ್ಯೋತಿಗೆ ತವರು ಮನೆಯಿಂದ ಹಣ ತರುವಂತೆ ಪಿಡಿಸುತ್ತಿದ್ದ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂದ ಕಲಬುರಗಿ ಮಹಿಳಾ ಠಾಣೆಯಲ್ಲಿ ಪತಿ ಲೋಕೇಶ್ ಮತ್ತು ಆತನ ಕುಟುಂಬಸ ವಿರುದ್ಧ ಪ್ರಕರಣ ದಾಖಲಾಗಿದೆ.