Uncategorized

ಕಲಬುರಗಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ; ಜನರ ಸಮಸ್ಯೆಗಳಿಗೆ ಸ್ಪಂದನೆ

ಕಲಬುರಗಿ: ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಕಾಳಗಿ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಿ ಜನರ‌ ಸಮಸ್ಸೆಗೆ ಸ್ಪಂಧಿಸುವ ಕೆಲಸ ಮಾಡಿದರು. ಹೊಸಳ್ಳಿ (ಎಚ್) ಗ್ರಾಮದಲ್ಲಿ ಸಮಸ್ಸೆಗಳ ಕುರಿತಾಗಿ 124 ಅರ್ಜಿ ಬಂದಿದ್ದು ಇದರಲ್ಲಿ 33 ಅರ್ಜಿಗಳಿಗೆ ಸ್ಥಳದಲ್ಲಿಯೆ ಪರಿಹಾರ ಜಿಲ್ಲಾಧಿಕಾರಿಗಳು ನೀಡಿದರು.

ಶೆನಿವಾರ ಹೊಸಳ್ಳಿ (ಹೆಚ್) ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರನ್ನು ಗ್ರಾಮಸ್ಥರು ಡೊಳ್ಳು ಬಾರಿಸಿ ಗ್ರಾಮಕ್ಕೆ ಸ್ವಾಗತಿಸಿಕೊಂಡರು. ಜಿ.ಪಂ. ಸಿ.ಇ.ಓ. ಡಾ.ದಿಲೀಷ್ ಶಶಿ, ಸಹಾಯಕ ಆಯುಕ್ತೆ ಮೋನಾ ರೂಟ್ ಜಿಲ್ಲಾಧಿಕಾರಿಗಳಿಗೆ ಸಾಥ ನೀಡಿದ್ದಾರೆ. ಜನರ ಸಮಸ್ಸೆ ಆಲಿಸಲು ಮುಂದಾದ ಜಿಲ್ಲಾಧಿಕಾರಿಗಳಿಗೆ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ, ಗ್ರಂಥಾಲಯ ಕಟ್ಟಡ ಸ್ಥಾಪನೆ, ಪ್ರೌಢ ಶಾಲೆ ಸ್ಥಾಪನೆ, ಪಿಂಚಣಿ, ಪಹಣಿ ತಿದ್ದುಪಡಿ ಹೀಗೆ ವಿಭಿನ್ನ ಸಮಸ್ಯೆಗಳ ಅರ್ಜಿಗಳ ಸರಮಾಲೆ ಹರಿದುಬಂದವು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 68 ಅರ್ಜಿಯಲ್ಲಿ ಪಿಂಚಣಿಗೆ ಸಂಬಂಧಿಸಿದ 33 ಅರ್ಜಿಗಳನ್ನು ಸ್ಥಳದಲ್ಲಿಯೆ ಬಗೆಹರಿಸಿ ಅರ್ಹ ಫಲಾನುಭವಿಗಳಿಗೆ ಆದೇಶ ಪತ್ರ ನೀಡಿದರು‌. ಇನ್ನುಳಿದಂತೆ 26 ತಾಲೂಕು ಪಂಚಾಯತಿ, 4 ಕೃಷಿ ಇಲಾಖೆ, 12 ಪಂಚಾಯತ್ ರಾಜ್ ಇಲಾಖೆ, 4 ಭೂದಾಖಲೆಗಳ ಇಲಾಖೆ, 5 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, 2 ಶಿಕ್ಷಣ ಇಲಾಖೆ, 2 ಜೆಸ್ಕಾಂ ಹಾಗೂ 2 ಸಾರಿಗೆ ಸಂಸ್ಥೆಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಸ್ವೀಕೃತಗೊಂಡಿದ್ದು, ಇವುಗಳ ವಿಲೇವಾರಿಗೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದರು.

ಗರ್ಭಿಣಿಯರಿಗೆ ಸೀಮಂತ:

ಇದೆ ಸಂದರ್ಭದಲ್ಲಿ‌ ಗರ್ಭಿಣಿ ಬಾಣಂತಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೀಮಂತ ಮಾಡಿ ಮಾತೃಪೂರ್ಣ ಯೋಜನೆಯಡಿ ಗುಣಮಟ್ಟದ ಆಹಾರಗಳ ಕಿಟ್‍ಗಳನ್ನು ಡಿ.ಸಿ. ವಿತರಿಸಿದರು. ಗ್ರಾಮ ವಾಸ್ತವ್ಯ ಅಂಗವಾಗಿ ಸಾಂಕೇತಿಕವಾಗಿ ನಾಲ್ವರು ಹಿರಿಯ ನಾಗರಿಕರಿಗೆ ಪಿಂಚಣಿ ಆದೇಶ, ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಆದೇಶ ಪತ್ರ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯಡಿ ಪಾಸ್ ಬುಕ್ ವಿತರಿಸಿದರು.

ಆರೋಗ್ಯ ಶಿಬಿರ:

ಗ್ರಾಮ ವಾಸ್ತವ್ಯ ಅಂಗವಾಗಿ ಆರೋಗ್ಯ ಇಲಾಖೆಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ ಅಯೋಜಿಸಿ ಗ್ರಾಮಸ್ಥರಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಸಾಮಾನ್ಯ ತಪಾಸಣೆ ನಡೆಸಲಾಯಿತು. 59 ಜನರು ಮಧುಮೇಹ, ಅಧಿಕ ರಕ್ತದೊತ್ತಡ ತಪಾಸಣೆಗೆ ಒಳಪಟ್ಟರು. 64 ಜನರು ಸಾಮಾನ್ಯ ಕಾಯಿಲೆಯ ಪ್ರಾಥಮಿಕ ತಪಾಸಣೆ ಮಾಡಿಕೊಂಡರು. 64 ಜನರಿಗೆ ಕೋವಿಡ್ ಲಸಿಕೆ ನೀಡಲಾಯಿತು.

ಭಾನುವಾರ ವಿಜ್ಞಾನಿಗಳ ತಂಡ ಭೇಟಿ:

ಇದೆವೇಳೆ ಭೂಕಂಪನದಿಂದ ಭಯಭೀತಗೊಂಡಿರುವ ಜನರಿಗೆ ಧೈರ್ತ ತುಂಬುವ ಕೆಲಸ ಮಾಡಿದ ಜಿಲ್ಲಾಧಿಕಾರಿಗಳು, ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಕೆಲವೆಡೆ ಕಳೆದ 10 ದಿನದಿಂದ ಭೂಕಂಪನವಾಗುತ್ತಿದೆ. ಕಾರಣ ಪತ್ತೆ ಮಾಡಲು ರವಿವಾರ (ಅ.17) ಹೈದ್ರಾಬಾದಿನಿಂದ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ (ಎನ್.ಜಿ.ಆರ್.ಐ) ವಿಜ್ಞಾನಿಗಳ ತಂಡ ಆಗಮಿಸಲಿದೆ. ಯಾರು ಭಯ ಪಡುವದು ಅಗತ್ಯವಿಲ್ಲ ಮನೆಗಳು ಸುರಕ್ಷಿತ‌ ಹಂತದಲ್ಲಿದ್ದರೆ ಮನೆಯಲ್ಲಿ ಜನರು ವಾಸಿಸಬೇಕು ಇಲ್ಲದಿದ್ರೆ ಜಿಲ್ಲಾಢಳಿತ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಇರುವಂತೆ ಸಲಹೆ ಮಾಡಿದರು‌. ಒಟ್ನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಿಂದ ಕಾಳಗಿ ತಾಲೂಕಿನ‌ ಜನರಲ್ಲಿ ಒಂದಿಷ್ಟು ಆತ್ಮಸ್ತೈರ್ಯ ಮೂಡುವಂತಾಗಿದೆ…

Related Articles

Leave a Reply

Your email address will not be published.

Back to top button