Uncategorized
ಬಾಬಾ-ದತ್ತ ವಿವಾದ: ಆಕ್ಷೇಪಣೆ ಸಲ್ಲಿಕೆಗೆ 1 ತಿಂಗಳು ಕಾಲವಕಾಶ: ಸಚಿವ ಮಾಧುಸ್ವಾಮಿ
ಚಿಕ್ಕಮಗಳೂರು: ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿಚಾರವಾಗಿ ಈಗಾಗಲೇ ಸಂಪುಟ ಉಪಸಮಿತಿ ರಚನೆಯಾಗಿದ್ದು, ಆಕ್ಷೇಪಣೆ ಸಲ್ಲಿಸಲು 1 ತಿಂಗಳ ಕಾಲವಕಾಶವಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ವರ್ಷಗಳಿಂದ ಪ್ರಕರಣ ಮುಂದುವರಿದಿದೆ. ಅರ್ಚಕರನ್ನು ನೇಮಿಸುವ ಬಗ್ಗೆ ನ್ಯಾಯಾಲಯದ ಸೂಚನೆಯಂತೆ ಸರ್ಕಾರ ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥಪಡಿಸಲು ಸಂಪುಟ ಉಪಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ನ್ಯಾಯಾಲಯದ ಸೂಚನೆಯಂತೆ ಸರ್ಕಾರ ಮುಂದುವರಿಯಲಿದೆ. ಅಹವಾಲುಗಳನ್ನು ದಾಖಲೆ ಸಹಿತ ಕಮಿಟಿಗೆ ಸಲ್ಲಿಸಿ ಅಭಿಪ್ರಾಯ ಮಂಡಿಸಬಹುದಾಗಿದೆ. ಒಂದುವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದರೆ ಚಿಕ್ಕಮಗಳೂರಿಗೆ ಬಂದು ಅಹವಾಲನ್ನು ಕೇಳಲಾಗುವುದು ಎಂದು ತಿಳಿಸಿದರು.