Uncategorized

ಧಾರವಾಡದಲ್ಲಿ ಜಂಬೂ ಸವಾರಿಗೆ ಕೃತಕ ಆನೆ: ಬೈಕ್ ನಲ್ಲಿ ಜಂಬೂ ಸವಾರಿಗೆ ಸಿದ್ಧವಾದ ಗಜರಾಜ

ಧಾರವಾಡ: ಪ್ರತಿವರ್ಷ ವಿಜಯದಶಮಿ ಬಂತೆಂದರೆ ಸಾಕು ಧಾರವಾಡ ಜಂಬೂಸವಾರಿ ನೋಡುಗರ ಕಣ್ಮನ ಸೆಳೆಯುತ್ತಿತ್ತು. ಆದರೆ ಕಳೆದೆರಡು ವರ್ಷದಿಂದ ಸಡಗರ ಸಂಭ್ರಮವಿಲ್ಲದೆ ಕಳೆಗುಂದಿದ್ದ ವಿಜಯದಶಮಿ ಜಂಬುಸವಾರಿ ಈ ಬಾರಿ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತಿದೆ. ಪ್ರಸಕ್ತ ವರ್ಷವೂ ಧಾರವಾಡದಲ್ಲಿ ಜಂಬೂ ಸವಾರಿ ಉತ್ಸವಕ್ಕೆ ಪರವಾನಿಗಿ ಸಿಗದೆ ಹಿನ್ನೆಲೆಯಲ್ಲಿ, ಧಾರವಾಡಿಗರು ಈಗ ಕೃತಕ ಆನೆಯ ಮೊರೆ ಹೋಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೊರೋನಾ ಮಹಾಮಾರಿ ಕಾರಣದಿಂದಾಗಿ ವಿಜಯದಶಮಿ ಹಬ್ಬವನ್ನು ಧಾರವಾಡದಲ್ಲಿ ಸರಳವಾಗಿ ಆಚರಣೆ ಮಾಡಕೊಂಡು ಬರಲಾಗುತ್ತಿದೆ. ಜಂಬೂ ಸವಾರಿ ಸೇರಿದಂತೆ ಮೆರಣಿಗೆಗೂ ಮಾಡಲು ಕೂಡಾ ಅನುಮತಿ ಸಿಕ್ಕಿರಲಿಲ್ಲ. ಆದ್ದರಿಂದ ಕಳೆದ ವರ್ಷ ಓಮಿನಿ ವಾಹನಕ್ಕೆ ಗಜರಾಜನ ರೂಪ ನೀಡುವ ಮೂಲಕ ಜಂಬೂಸವಾರಿ ಧಾರವಾಡಿಗರನ್ನ ಆಕರ್ಷಣೆ ಮಾಡಿತ್ತು. ಅದೇ ರೀತಿ ಈ ಬಾರಿ ಆಕ್ಟಿವಾ ಹೊಂಡ ವಾಹನವನ್ನೇ ಆನೆಯ ರೀತಿ ನಿರ್ಮಾಣ ಮಾಡಿಲಾಗಿದ್ದು, ಅದನ್ನು ಈ ಹಿಂದೆ ನಗರದ ಜಂಬೂಸವಾರಿ ನಡೆಯುತ್ತಿದ್ದ ಮಾರ್ಗವಾಗಿ ಸಂಚರಿಸಲು ಗೌಳಿಗಲ್ಲಿ‌‌ ದಸರಾ‌‌ ಆಚರಣಾ ಕಮಿಟಿ ಮುಂದಾಗಿದೆ.

ಇನ್ನೂ ಕೊರೋನ ಮಹಾಮಾರಿ ತಗ್ಗಿದ್ದರಿಂದ ಧಾರವಾಡದ ಗೌಳಿಗಲ್ಲಿಯ ಮಾರುತಿ ದೇವಸ್ಥಾನದ ಕಮಿಟಿ ಮುಖಂಡರು ದಸರಾ ಉತ್ಸವ ಮಾಡಲು ಆನೆ ತರಲು ಪರವಾನಿಗಿ ಕೇಳಿದ್ದರು. ಆದರೆ, ಅದಕ್ಕೆ ಅನುಮತಿ ಸಿಗದ ಕಾರಣ ಅವರು ಕಲಾವಿದ ಮಂಜುನಾಥ ಹಿರೇಮಠ ಅವರಿಗೆ ಕೃತಕ ಆನೆ ಸಿದ್ಧಪಡಿಸಲು ಮನವಿ ಮಾಡಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿ ಕಲಾವಿದ ಮಂಜುನಾಥ ಹಿರೇಮಠ ಅವರು ತಮ್ಮ ಸ್ಕೂಟಿಯಲ್ಲೇ ಕೃತಕ ಆನೆಯೊಂದನ್ನು ಸಿದ್ಧಪಡಿಸಿ ದಸರಾ ಉತ್ಸವಕ್ಕೆ ಸಿದ್ಧಗೊಳಿಸಿದ್ದಾರೆ.

ಸ್ಕೂಟಿಯಲ್ಲಿ ಸಿದ್ಧಗೊಂಡ ಆನೆ ಈಗ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಕಲಾವಿದ ಮಂಜುನಾಥ್ ಹಿರೇಮಠ್ ಪ್ರತಿಯೊಂದು ಹಬ್ಬಕ್ಕೂ ವಿಶೇಷವಾಗಿ ಹೊಸತೊಂದು ರೀತಿಯಲ್ಲಿ ವಿಭಿನ್ನನವಾಗಿ ಏನಾದರೂ ಮಾಡುವ ಮೂಲಕ ತಮ್ಮ ಕಲೆಯ‌ ಮೂಲಕವೇ ಸಾಧನೆ ಮಾಡುತ್ತಾ ಬಂದಿದ್ದು, ಈಗ‌ ಧಾರವಾಡ ವಿಜಯ ದಶಮಿ‌ ಜಂಬೂ ಸವಾರಿ ಉತ್ಸವಕ್ಕೆ ಕೃತಕ‌ ಆನೆ ಮಾಡುವ ಮೂಲಕ‌ ಮೆಚ್ಚುಗೆ ಪಡೆದುಕೊಂಡಿದ್ದಾರೆ.‌

Related Articles

Leave a Reply

Your email address will not be published.

Back to top button