Uncategorized

ಹೇಮರೆಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯಲ್ಲಿ ನವರಾತ್ರಿ ಆಚರಣೆ: ದಾಂಡಿಯಾ ನೃತ್ಯಗೈದು ಮಹಿಳೆಯರ ಸಂಭ್ರಮ

ಬಾಗಲಕೋಟೆ: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಮಹಿಳೆಯರು ದಾಂಡಿಯಾ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.

ಬಾಗಲಕೋಟೆಯ ನಂದೀಶ್ವರ ನಗರದಲ್ಲಿರುವ ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯಲ್ಲಿ ನವರಾತ್ರಿ ಹಬ್ಬದ ಉತ್ಸವವನ್ನು ಆಯೋಜಿಸಲಾಗಿತ್ತು. ದೇವಿಯ ಉತ್ಸವ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು. ಮಹಿಳೆಯರು ದೇವಿಗೆ ಪೂಜೆ ಸಲ್ಲಿಸಿದ ಬಳಿಕ ದಾಂಡಿಯಾ ನೃತ್ಯಗೆ ಹೆಜ್ಜೆ ಹಾಕಿದರು. ಕೇಸರಿ ಬಣ್ಣದ ಸೀರೆಯುಟ್ಟಿದ್ದ ಸುಮಂಗಲಿಯರು ಮಿಂಚಿದರು. 80ಕ್ಕೂ ಹೆಚ್ಚು ಮಹಿಳೆಯರು ಸೇರಿ ವಿವಿಧ ಬಗೆಯ ಹಾಡುಗಳಿಗೆ ನೃತ್ಯಗೈದರು.

ಪ್ರತಿ ವರ್ಷದಂತೆ ಈ ಬಾರಿಯೂ ಹೇಮರೆಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯಲ್ಲಿ ನವರಾತ್ರಿ ಹಬ್ಬದ ಸಂಭ್ರಮದ ಕಳೆಗಟ್ಟಿತ್ತು. ಇದೇ ವೇಳೆ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಕಟಗೇರಿ ಮಾತನಾಡಿ, ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮವಿದೆ.ಪ್ರತಿ ವರ್ಷ ಸಂಸ್ಥೆಯಲ್ಲಿ ನವರಾತ್ರಿ ಹಬ್ಬದಾಚರಣೆ ಮಾಡಲಾಗುತ್ತಿದೆ. ದೇವಿಯ ಆರಾಧನೆಯಿಂದ ಜೀವನದಲ್ಲಿ ಸಾಕಷ್ಟು ಸುಖ ಶಾಂತಿ ನೆಮ್ಮದಿ ಬರಲಿದೆ. ಹೀಗಾಗಿ ಸುಮಂಗಲಿಯರು ತಮ್ಮ ತಮ್ಮ ಮನೆ ಮನೆಗಳಲ್ಲಿ ದೇವಿ ಪೂಜೆ ಪುರಸ್ಕಾರ ಮಾಡುವುದು ಸರ್ವಶ್ರೇಷ್ಠ ಎಂದರು.

ದಾಂಡಿಯಾ ನೃತ್ಯ ಕಾರ್ಯಕ್ರಮದಲ್ಲಿ ಮಹಿಳೆಯರೆಲ್ಲರೂ ಸೇರಿ ಗುಂಪು ಫೋಟೋ , ಸೆಲ್ಫಿ ಫೋಟೋ ತೆಗೆಯಿಸಿಕೊಂಡು ಸಂಭ್ರಮಿಸಿದರು. ಈ ವೇಳೆ ಸುಮಂಗಲಾ ಕಕರಡ್ಡಿ, ಸುವರ್ಣಾ ಕೊಳಚಿ, ನಿರ್ಮಲಾ ಅರಕೇರಿ, ರೇಣುಕಾ ಪಾಟೀಲ್, ಬೋರಮ್ಮ ಬಿರಾದಾರ ಪಾಟೀಲ್, ಕಾವೇರಿ ಪರಡ್ಡಿ, ಹೇಮಾ ಮೆಳ್ಳಿಗೇರಿ, ಮಲ್ಲಮ್ಮ ಪಾಟೀಲ್, ಅನಸೂಯಾ ಪಾಟೀಲ್, ಸುಜಾತಾ ಪಾಟೀಲ್, ಗೀತಾ ಗಿರೀಜಾ ನಗರಸಭೆ ಸವಿತಾ ಲೆಂಕೆನ್ನವರ ಇದ್ದರು.

Related Articles

Leave a Reply

Your email address will not be published.

Back to top button