Uncategorized

ಸಿದ್ದರಾಮಯ್ಯ ಮೊದಲು ಕ್ಷಮೆ ಕೇಳಲಿ, ಆಗ ನಾನೂ ಕೇಳುವೆ: ಶಾಸಕ ಸಿ ಟಿ ರವಿ

ಚಿಕ್ಕಮಗಳೂರು: ರಾಜಕೀಯ ಅಸ್ತಿತ್ವ ಕೊಟ್ಟ ದೇವೇಗೌಡರ ಬಳಿ ಸಿದ್ದರಾಮಯ್ಯ ಕ್ಷಮೆ ಕೇಳಲಿ. ಆಗ ನಾನೂ ಕೇಳುವೆ ಎಂದು ಶಾಸಕ ಸಿ ಟಿ ರವಿ ಸವಾಲು ಹಾಕಿದರು.

ಕುರುಬ ಜನಾಂಗಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನಿಂದಿಸಿ, ಉದ್ಧಟತನದ ಹೇಳಿಕೆ ನೀಡಿರುವ ಶಾಸಕ ಸಿ ಟಿ ರವಿ ತಕ್ಷಣ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ, ಜಿಲ್ಲಾ ಕೇಂದ್ರದಲ್ಲಿ ಕುರುಬ ಸಮುದಾಯದ ಕಾರ್ಯಕರ್ತರು ಪ್ರತಿಭಟನೆ ನಡಸಿರುವ ಹಿನ್ನೆಲೆಯಲ್ಲಿ ಸಿ ಟಿ ರವಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ರಾಜ್ಯದಿಂದ ಹೊರಗೆ ಸಿದ್ದರಾಮಯ್ಯ ಅವರನ್ನು ಯಾರು ಗುರುತಿಸುತ್ತಾರೆ? 14 ದೇಶ ತಮ್ಮ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಮೋದಿಗೆ ಕೊಟ್ಟಿವೆ. ಅಂತಹ ಪ್ರಧಾನಿ ಬಗ್ಗೆ ಹೆಬ್ಬೆಟ್ಟು ಅಂತ ಹೇಳಿದರು. ಇದು ಸಂಸ್ಕೃತಿಯಾ? ಕಂಬಳಿ ಹೊದಿಯೋದು ಜಾತಿ ಕಾರಣಕ್ಕೆ ಅನ್ನುವುದಾದರೆ ಟೋಪಿ ಹಾಕುವುದೂ ಜಾತಿ ಕಾರಣಕ್ಕೇ ಇರಬೇಕಲ್ಲವೇ ಎಂದಿದ್ದೆ ಎಂದು ಸಮರ್ಥಿಸಿಕೊಂಡರು.

ನಾನು ಆರೋಪ ಮಾಡಿಲ್ಲ. ಸಿದ್ದರಾಮಯ್ಯ ಭಾವಿಸಿರುವಂತೆ ಎಂದು ಹೇಳಿ, ಹೇಳಿಕೆ ನೀಡಿದ್ದೆ. ನಾನು ಕುರುಬ ಸಮುದಾಯದ ಬಗ್ಗೆ ಮಾತನಾಡಿಲ್ಲ. ಕುರುಬರು ನನ್ನ ಜೊತೆಯೇ ಇದ್ದಾರೆ. ತಪ್ಪಾಗಿದ್ದರೆ ಕ್ಷಮೆ ಕೇಳೋಕೆ ತನಗೆ ಯಾವ ಸಂಕೋಚವೂ ಇಲ್ಲ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button