Uncategorized
ಮತಾಂತರ ದೇಶಾಂತರಕ್ಕೆ ಸಮವೆಂದು ಗಾಂಧೀಜಿ ಹೇಳಿದ್ದರು: ಸಿ ಟಿ ರವಿ
ಚಿಕ್ಕಮಗಳೂರು : ಮತಾಂತರ ಎಂಬುದು ದೇಶಾಂತರಕ್ಕೆ ಸಮವೆಂದು ಗಾಂಧೀಜಿ ಅವತ್ತೇ ಹೇಳಿದ್ದರು ಎಂದು ಸಿ ಟಿ ರವಿ ಹೇಳಿದರು.
ಮತಾಂತರಿಯಾದವ ತನ್ನ ಸಂಸ್ಕೃತಿಯನ್ನ ಬದಲಿಸುತ್ತಾನೆ. ಮುಂದಿನ ದಿನಗಳಲ್ಲಿ ದೇಶಾಂತರದ ಬಗ್ಗೆ ಯೋಚಿಸುತ್ತಾನೆ. ಮತಾಂತರಗೊಂಡ ಮೇಲೆ ನಾವು ಭಾರತೀಯರಲ್ಲ ಅನ್ನೋ ಮನೋಭಾವನೆ ಬೆಳೆಯುತ್ತೆ. ಇಂತಹ ಗಾಂಧೀಜಿಯವರೇ ಗ್ರಹಿಸಿದ್ದರು ಎಂದರು.
ಮತಾಂತರದ ವಿರುದ್ಧ ಕ್ರಮಕ್ಕೆ ಸರ್ಕಾರ ಎನು ನಿರ್ಧಾರ ತೆಗೆದುಕೊಳ್ಳುತ್ತೋ ಅಂತ ನೋಡುತ್ತಿದ್ದೇವೆ. ಸರ್ಕಾರ ಕಠಿಣ ಕ್ರಮ ಕೈಗೊಂಡರೆ ಅದನ್ನ ಸ್ವಾಗತಿಸುತ್ತೇನೆ ಎಂದರು.