ಕಲಬುರಗಿ ಜಿಲ್ಲೆಗೆ ವರುಣಾಘಾತ; ಬೆಳೆ ಕಳೆದುಕೊಂಡು ರೈತರು ಹೈರಾಣ
ಕಲಬುರಗಿ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋಹಾಗೆ ಬಿಟ್ಟು ಬಿಡದೆ ವರುಣನ ಅಬ್ಬರಕ್ಕೆ ಕಷ್ಟಪಟ್ಟು ತೆಗೆದ ಇಳುವರಿ ಹಾನಿಯಾಗಿ ರೈತರು ಮತ್ತೆ ಕಣ್ಣಿರಲ್ಲಿ ಕೈ ತೊಳೆಯುವಂತ ಸ್ಥೀತಿ ಕಲಬುರಗಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ಕಳೆದ ಬಾರಿ ಪ್ರವಾಹದಿಂದ ಕಂಗೇಟ್ಟ ರೈತರು ಈ ಬಾರಿಯಾದ್ರೂ ಸರಿಯಾದ ಇಳುವರಿ ತೆಗೆದು ಆರ್ಥಿಕ ಸಂಕಷ್ಟ ದೂರು ಮಾಡಿಕೊಳ್ಳಬೇಕೆಂದ್ರೆ ಬಿಟ್ಟು ಬಿಡದೆ ಅಬ್ಬರಿಸುತ್ತಿರುವ ವರುಣ ರೈತರ ಕನಸ್ಸಿಗೆ ಕೊಳ್ಳೆ ಇಟ್ಟಿದ್ದಾನೆ.ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಹಲವಡೆ ಮತ್ತೆ ಕಳೆದ ನಾಲ್ಕು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಮಳೆಯಿಂದಾಗಿ ಜಿಲ್ಲೆಯ ಹಲವಡೆ ರೈತರು ಬೆಳೆದ ಬೆಳೆ ಹಾನಿಯಾಗಿದೆ.
ನಿನ್ನೆ ರಾತ್ರಿ ಬೀಸಿದ ಬಾರಿ ಬಿರುಗಾಳಿ ಮತ್ತು ಮಳೆ ಹಿನ್ನೆಲೆ ಲಕ್ಷಾಂತರ ಮೌಲ್ಯದ ಬಾಳೆ ಬೆಳೆ ನೆಲಕ್ಕುರುಳಿದ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುಶೀಲಾಬಾಯಿ ಅನ್ನೋರಿಗೆ ಸೇರಿದ್ದ ನಾಲ್ಕು ಎಕ್ಕರೆ ಬಾಳೆ ತೋಟ ಬಹುತೇಖವಾಗಿ ನೆಲಕಚ್ಚಿದೆ. ಕಟಾವಿಗೆ ಬಂದಿದ್ದ ಸುಮಾರು 8 ಲಕ್ಷ ಮೌಲ್ಯದ ಬಾಳೆ ಬೆಳೆ ಕಳೆದುಕೊಂಡ ರೈತ ಮಹಿಳೆ ಕಂಗಾಲಾಗಿದ್ದಾಳೆ.
ಇನ್ನು ಮಹಾರಾಷ್ಟ್ರ ಗಡಿಭಾಗ ಹಾಗೂ ಅಫಜಲಪೂರ ತಾಲೂಕಿನ ಹಲವಡೆ ನಿರಂತರ ಮಳೆ ಸುರಿಯುತ್ತಿರುವದರಿಂದ ಮಹಾರಾಷ್ಟ್ರ ಗಡಿಭಾಗದ ಕೂರನೂರು ಡ್ಯಾಂಮ್ದಿಂದ ಬೋರಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ. ಇದರಿಂದಾಗಿ ಅಫಜಲಪೂರ ತಾಲೂಕಿನ ಬೋರಿ ನದಿ ತಟದ ಒಂಬತ್ತು ಹಳ್ಳಿಗಳ ಜನರ ನಿದ್ದೆ ಹಾಳಾಗಿದೆ. ಜೇವರ್ಗಿ ಕೆ, ದಿಕ್ಸಂಗಿ, ಗೌರ್ (ಕೆ) ಸೇರಿ 9 ಹಳ್ಳಿಗಳಲ್ಲಿ ನೀರು ನಿಂತು ಸಾವಿರಾರು ಎಕ್ಕರೆ ಹೊಲ ಅಕ್ಷರಶಹ ಕೆರೆಯಂತಾಗಿವೆ. ಕಷ್ಟಪಟ್ಟು ಬೆಳೆದ ತೊಗರಿ, ಶೇಂಗಾ, ಅಲಸಂದಿ, ಹತ್ತಿ ಸೇರಿ ಬೆಳೆದ ಸಂಪೂರ್ಣ ಬೆಳೆ ಹಾನಿಯಾಗಿದೆ ಅಂತ ರೈತರು ಕಣ್ಣಿರಿಡುತ್ತಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿಯೂ ಇದೆ ಪರಸ್ಥೀತಿವುಂಟಾಗಿತ್ತು. ಬೆರಳರಣಿಕರಯಷ್ಟು ರೈತರು ಹೊರೆತು ಪಡೆಸಿದ್ರೆ ಪರಿಹಾರಕ್ಕಾಗಿ ರೈತರು ಇಂದಿಗೂ ಕಚೇರಿಗಳಿಗೆ ಅಲೇದಾಟ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಚಿಂಚೋಳಿ ತಾಲೂಕಿನ ಗಂಡೊರಿ ನಾಲಾ ಕೆರೆ ತಟದ ಅರಣಕಲ್ ಗ್ರಾಮದಲ್ಲಿಯೂ ರೈತರ ಗೊಳು ಮುಗಿಲು ಮುಟ್ಟಿದೆ. ನಾಲಾದ ತಡೆಗೋಡೆ ಒಡೆದು ಸುಮಾರು 476 ಎಕರೆ ಜಮೀನು ನೀರಾವರಿ ಬೆಳೆ ಉಳಾಗಡ್ಡಿ ಹಾನಿಯಾಗಿದೆ. ರೈತರು ಬೆವರು ಸುರಿಸಿ ಬೆಳೆದ ಲಕ್ಷ ಲಕ್ಷ ರೂಪಾಯಿ ನೀರುಪಾಲಾಗಿದೆ. ತೊಗರಿ ಕೂಡಾ ಬರ್ಬಾದ ಆಗಿದೆ ಅಂತ ರೈತರು ಗೋಳು ತೊಡಿಕೊಂಡಿದ್ದಾರೆ.
ವರುಣನ ನಿರಂತರ ಅಬ್ಬರದಿಂದ ರೈತರ ಬೆಳೆ ಮಾತ್ರವಲ್ಲ ಜಿಲ್ಲೆಯ ಹಲವಡೆ ಮನೆಗಳು ಕೂಡಾ ಹಾನಿಯಾಗಿವೆ. ಒಟ್ಟಾರೆ ಕಳೆದ ವರ್ಷ ಮಳೆ ಹಾಗೂ ಪ್ರವಾಹದಿಂದ ಹೈರಾಣಾಗಿದ್ದ ಕಲಬುರಗಿ ಜಿಲ್ಲೆಗೆ ಈ ವರ್ಷವೂ ಮಳೆ ಮತ್ತು ಪ್ರವಾಹ ಜನತೆಯ ನಿದ್ದೆ ಕಸಿದಿದೆ.