Uncategorized
ಕಲಬುರ್ಗಿ: ಐಪಿಎಲ್ ಬೆಟ್ಟಿಂಗ್ ದಂದೆಯಲ್ಲಿ ತೊಡಗಿದ್ದ ಮೂವರ ಬಂಧನ
ಕಲಬುರ್ಗಿ: ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮತ್ತೊಂದು ತಂಡವನ್ನು ಪತ್ತೆಹಚ್ಚಿ ಜೈಲಿಗೆ ಅಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಮ್ಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗುಬ್ಬಿ ಕಾಲೋನಿಯಲ್ಲಿ ಕಾರ್ಯಾಚರಣೆ ನಡೆಸಿ ಪೋಲಿಸರು ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ರಾಜಕುಮಾರ ಮಲಾರಿ(40), ರಾಜು ಅಗರವಾಲ್ (35), ಆನಂದ ರಾಠೋಡ್ (38) ಬಂಧಿತ ಆರೋಪಿಗಳು.
ಆರೋಪಿಗಳಿಂದ 3 ಲಕ್ಷ ರೂ ನಗದು, ಕಾರು, ಟಿವಿ ಮತ್ತು ಮೊಬೈಲ್ ಪೋನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐಪಿಎಲ್ ಸೆಮಿಫೈನಲ್ನಲ್ಲಿ ಕೆಕೆಆರ್ ಮತ್ತು ಡೆಲ್ಲಿ ಟಿಮ್ಗಳ ಆಟಕ್ಕೆ ಬೆಟ್ಟಿಂಗ್ನಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇತ್ತಿಚಿಗಷ್ಟೇ ಅಶೋಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಟ್ಟಿಂಗ್ ದಂದೆ ನಡೆಸುತ್ತಿದ್ದ ಆರೋಪಿಗಳನ್ನು ಪೊಲೀಸರು ಹೆಡೆಮೂರಿ ಕಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.