Uncategorized
ಮನೆ ಕಾಲಂ ತಗ್ಗಿನಲ್ಲಿ ನಿಂತಿದ್ದ ನೀರಿನಲ್ಲಿ ಮುಳುಗಿ ಮೂರು ಮಕ್ಕಳು ದುರ್ಮರಣ
ಕಲಬುರಗಿ: ಮನೆಯ ಕಾಲಂ ಹಾಕಲು ಅಗೆದ ತಗ್ಗಿನಲ್ಲಿ ನಿಂತಿದ್ದ ನೀರಿನಲ್ಲಿ ಮುಳುಗಿ ಮೂರು ಮಕ್ಕಳು ದುರ್ಮರಣ ಹೊಂದಿರುವ ಘಟನೆ ಇಲ್ಲಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದಿದೆ.
ದರ್ಶನ್ (12), ಪ್ರಶಾಂತ (10) ಹಾಗೂ ವಿಘ್ನೇಶ್ (9) ಮೃತ ಮಕ್ಕಳು. ಮನೆ ಕಟೋದಕ್ಕೆ ಕಾಲಂ ಹಾಕಲು ತಗ್ಗು ಅಗೆಯಲಾಗಿತ್ತು. ಕಳೆದ ರಾತ್ರಿ ಸುರಿದ ಧಾರಕಾರ ಮಳೆಯಿಂದ ತಗ್ಗು ನೀರಿನಿಂದ ತುಂಬಿಕೊಂಡಿದೆ.
ಆಟವಾಡುತ್ತ ಮಳೆ ನೀರಿನಿಂದ ತುಂಬಿದ ಗುಂಡಿಗೆ ಬಾಲಕರು ಇಳಿದು ಹೊರಬರಲು ಆಗದೆ ಸಾವನಪ್ಪಿದ್ದಾರೆ. ಸ್ಥಳಿಯರ ಗಮನಕ್ಕೆ ಬಂದಾಗ ಮಕ್ಕಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ ದುರಾದೃಷ್ಟ ಮಕ್ಕಳು ಸಾವನ್ನಪ್ಪಿದ್ದಾರೆ.
ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರೀಶಿಲನೆ ಮಾಡಿದ್ದಾರೆ. ಈ ಕುರಿತು ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.