ಧಾರವಾಡದ ಗೊಂಗಡಿಕೊಪ್ಪದಲ್ಲಿ ಮಗು ಅನುಮಾನಾಸ್ಪದ ಸಾವು: ಗಂಡ, ಹೆಂಡತಿ ವೈಮನಸ್ಸಿಗೆ ಮಗು ಬಲಿ
ಧಾರವಾಡ: ಇನ್ನೂ ಆಡಿ ಬೆಳೆಯ ಬೇಕಾಗಿದ್ದ ಹನ್ನೊಂದು ತಿಂಗಳ ಮಗುವೊಂದು ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ನಡೆದಿದೆ. ತನ್ವೀರ್ ಅಗಸಿಮನಿ (11 ತಿಂಗಳು) ಮೃತ ಮಗು ಎಂದು ಗುರುತಿಸಲಾಗಿದೆ.
ಕಳೆದ ಅಕ್ಟೋಬರ್ 18 ರಂದು ತಡ ಸಂಜೆ ಏಕಾಏಕಿ ಅಸ್ವಸ್ಥಗೊಂಡಿದೆ. ಕುಟುಂಬಸ್ಥರ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯದಿದ್ದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮಗು ಮೃತಪಟ್ಟಿದೆ ಅಂದೇ ತಡ ರಾತ್ರಿ ಸಾವನಪ್ಪಿದೆ. ಆದರೆ ಮಗುವಿನ ಮೃತದೇಹದಿಂದ ವಿಷದ ವಾಸನೆ ಬರುತ್ತಿದೆ ಎನ್ನಲಾಗಿತ್ತು. ಮಗುವಿಗೆ ವಿಷ ಹಾಕಿ ಕೊಂದಿರುವ ಶಂಕೆ ವ್ಯಕ್ತವಾಗುತ್ತಿದ್ದು, ತಂದೆ – ತಾಯಿ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ಮಾಡುತ್ತಿದ್ದಾರೆ.
ಪೋಷಕರ ಜಗಳದಿಂದಾಗಿ ಮಗುವಿನ ಮೃತದೇಹ ಶವಾಗಾರದಲ್ಲಿಯೇ ಉಳಿದಿದ್ದು, ಇಬ್ಬರೂ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಮಗು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದಾರೆ. ತಂದೆ – ತಾಯಿ ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆ ವರದಿಯನ್ನು ಎಫ್ಎಸ್ಎಲ್ಗೆ ಕಳಿಸಲು ಪೊಲೀಸರು ನಿರ್ಧರಿಸಿದ್ದಾರೆ. ಈ ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ಇನ್ನೂ ಮಗುವಿನ ತಂದೆಯಾದ ಮಹ್ಮದ ಅಲಿ ಹಾಗೂ ಸಂಬಂಧಿಗಳು ಪತ್ನಿಯೇ ಮಗುವಿಗೆ ವಿಷ ಹಾಕಿ ಕೊಲೆ ಮಾಡಿದ್ದಾಳೆ, ಅಲ್ಲದೆ ಮನೆಯಲ್ಲಿ ಎಲ್ಲ ಸೌಲಭ್ಯವಿದ್ದರು ಸಮರೀನ್ ಶೌಚಾಲಯ ನೆಪ ಮಾಡಿಕೊಂಡು ದೂರು ಹೋಗಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದಳು. ಇದು ಸರಿಯಲ್ಲ ಎಂಬ ಮಾತುಗಳನ್ನು ಹೇಳಿದ್ವೀ. ನಾವು ಹೊಲಕ್ಕೆ ಹೋದ ಸಂದರ್ಭದಲ್ಲಿ ಮನೆಯಲ್ಲಿ ಮಗುವಿಗೆ ವಿಷ ಹಾಕಿದ್ದಾಳೆ ಎಂದು ಆರೋಪ ಮಾಡುತ್ತಿದ್ದಾರೆ.
ಅದರೆ ಇದಕ್ಕೆ ಪ್ರತಿಯಾಗಿ ಮಗುವಿನ ತಾಯಿ ಸಮರೀನ್ ಅವರ ತವರು ಮನೆಯವರು ಕೂಡಾ, ಈಗ ತಂದೆ ಹಾಗೂ ಕುಟುಂಬಸ್ಥರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದು, ಮಗುವಿನ ಸಾವಿಗೆ ಮಹ್ಮದ ಅಲಿ ಹಾಗೂ ಕುಟುಂಬಸ್ಥರು ಕಾರವೆಂದು ದೂರುತ್ತಿದ್ದಾರೆ. ಅಲ್ಲದೆ ಮದುವೆಯಾಗಿ ಒಂದುವರೇ ವರ್ಷವಾದರೂ ನಮ್ಮ ಮಗಳಿಗೆ ಗಂಡ ಹಿಂಸೆ ನೀಡುತ್ತಲ್ಲೇ ಬಂದಿದ್ದಾನೆ. ಮಗುವಿನ ಬಗ್ಗೆ ಅನುಮಾನ ಮಾಡಿ ಹಿಂಸೆ ಮಾಡಿದ್ದರು. ನಾವು ಇಂದು ನಾಳೆ ಸುಧಾರಿಸುತ್ತಾರೆ ಎಂದು ಮಗಳಿಗೆ ಬುದ್ದು ಹೇಳಿ ಕಳುಹಿಸುತ್ತಾ ಬಂದಿದ್ದೇವೆ ಎಂದು ಆರೋಪಿಸಿದ್ದಾರೆ. ಮಗುವಿನ ಸಾವಿನ ಹಿಂದೆ ಆರೋಪ ಪ್ರತ್ಯಾರೋಪ ಕೇಳಿ ಬಂದಿದ್ದು, ಪೊಲೀಸರ ತನಿಖೆಯ ನಂತರ ಪ್ರಕರಣ ಸತ್ಯಾಂಶ ಹೊರಬರಬೇಕಾಗಿದೆ.