Uncategorized

ಚಿತ್ತಾಪುರದಲ್ಲಿ ಕಳ್ಳರ ಕೈಚಳಕ: ಮೆಡಿಕಲ್, ಕಿರಾಣಿ ಅಂಗಡಿಗಳ ಕಳ್ಳತನ

ಕಲಬುರಗಿ: ಕಳ್ಳರ ಕೈಚಳಕದಿಂದ ಚಿತ್ತಾಪುರ ಪಟ್ಟಣದ ಜನ ಹೌಹಾರಿದ್ದಾರೆ. ತಡರಾತ್ರಿ ಅಂಗಡಿಗಳಿಗೆ ಕನ್ನ ಹಾಕಿದ ಕಳ್ಳರು ಆರೇಳು ಅಂಗಡಿಗಳ ಸೇಟರ್ ಮೂರಿದು ಸರಣಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ‌.

ಎಂದಿನಂತೆ ವ್ಯಾಪಾರಿಗಳು ನಿನ್ನೆ ರಾತ್ರಿ ವ್ಯಾಪಾರ ಮುಗಿಸಿಕೊಂಡು ಭ್ರದ್ರವಾಗಿ ತಮ್ಮ ಅಂಗಡಿಗಳನ್ನು ಮುಚ್ಚಿಕೊಂಡು ಮನೆಗೆ ತೆರಳಿದ್ದರು. ನಂತರ ಬೆಳಗ್ಗೆ ಅಂಗಡಿಗೆ ಬಂದಾಗ ಸೇಟರ್ ಗಳು ಬಾಯಿ ತೆರೆದು ನಿಂತಿರುವದನ್ನು ಕಂಡು ಹೌಹಾರಿದ್ದಾರೆ. ಚಿತಾಪೂರದ ಮೂರು ಕಡೆ ಕಳ್ಳರು ಕಳ್ಳತನ ಮಾಡಿದ್ದಾರೆ. ವಿಆರ್ ಕೋಳಿ ಕಿರಾಣಾ ಶಾಫ್, ಅಬ್ದುಲ್ ಕರಿಮ್‌ ಕಿರಾಣಾ, ಆಶೀಫ್‌ ಮೆಡಿಕಲ್ ಆ್ಯಂಡ್ ಜನರಲ್‌ ಸ್ಟೋರ್ ಒಳಗೊಂಡಂತೆ ಸರಣಿ ಅಂಗಡಗಳ ಕಳ್ಳತನ ಮಾಡಲಾಗಿದೆ. ಬೇರೆ ಬೇರೆ ಬಡಾವಣೆಯಲ್ಲಿ ಕಳ್ಳತನ ನಡೆದರೂ ಕಳ್ಳತನದ ಮಾದರಿ‌ ಮಾತ್ರ ಒಂದೆಯಾಗಿದೆ. ಅಂಗಡಿಗಳ ಸೇಟರ್ ಕಳೆಭಾಗದಿಂದ ರಾಡ್ ಹಾಕಿ ಒಳಹೊಕ್ಕು ಕಳ್ಳತನ ಮಾಡಲಾಗಿದೆ.

ಸ್ಥಳಕ್ಕೆ ಬೆರಳಚ್ಚು ತಂಡದವರು, ಶ್ವಾನದಳ ತಂಡ ಪೊಲೀಸ್ರು ಭೇಟಿ ನೀಡಿ ಪರೀಶಿಲನೆ‌ ಮಾಡಿದ್ದಾರೆ. ಕಳ್ಳರ ಪತ್ತೆಗೆ ಜಾಲ ಬಿಸಿದ್ದಾರೆ. ಈ ಕುರಿತು ಚಿತಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Related Articles

Leave a Reply

Your email address will not be published.

Back to top button