ಬೆಳಗಾವಿ: ಲಾಡ್ಜ್ ಗಳ ಮೇಲೆ ಏಕಾಏಕಿ ಪರಿಶೀಲನೆ ನಡೆಸಿದ ಪೋಲಿಸರು
ಬೆಳಗಾವಿ: ನಗರ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ದಿಟ್ಟ ಹೆಜ್ಜೆಯನ್ನ ಇಟ್ಟಿದ್ದಾರೆ ನಗರದಲ್ಲಿ ಇರುವ ಲಾಡ್ಜಗಳ ಮೇಲೆ ಕಳೆದ ರಾತ್ರಿ ಏಕಾಏಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ರಾತ್ರಿ ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ 100 ಕ್ಕೂ ಹೆಚ್ಚು ಲಾಡ್ಜ್ ಗಳನ್ನ ಎಸಿಪಿ ಹಾಗೂ ಇನ್ಸ್ ಪೆಕ್ಟರ್ ನೇತೃತ್ವದ 50 ಕ್ಕೂ ಹೆಚ್ಚು ಪೊಲೀಸ್ ತಂಡಗಳು ಅನಿರೀಕ್ಷಿತವಾಗಿ ಪರಿಶೀಲನೆ ಕೈಗೊಂಡಿದ್ದಾರೆ.
ಭೇಟಿ ನೀಡಿದ ವೇಳೆ ಲಾಡ್ಜ್ ಮಾಲೀಕರು ಹಾಗೂ ಮ್ಯಾನೇಜರ್ ಗಳಿಗೆ ಕಡ್ಡಾಯವಾಗಿ ಸಿಸಿಟಿವ್ಹಿ ಕ್ಯಾಮೆರಾ ಅಳವಡಿಸಲು, ಕಡ್ಡಾಯವಾಗಿ ಗ್ರಾಹಕರ ಗುರುತಿನ ಚೀಟಿ ಪಡೆಯಲು, ಕಡ್ಡಾಯವಾಗಿ ರೆಜಿಸ್ಟರ್ ನಿರ್ವಹಣೆ ಮಾಡಲು, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರದ ಠಾಣೆಗೆ ಮಾಹಿತಿ ನೀಡಲು ಹಾಗೂ ಅಕ್ರಮ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು ಕಟ್ಟು ನಿಟ್ಟಿನ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬೆಳಗಾವಿ ನಗರದಲ್ಲಿ ನಿರ್ಮಾಣವಾಗಿದ್ದ ಅಸುರಕ್ಷಿತ ವಾತವರಣವನ್ನು ಪೊಲೀಸರು ಮುಕ್ತ ಗೊಳಿಸುವಲ್ಲಿ ಯಶಸ್ವಿಯಾಗಿದ್ದು ಈ ಎಲ್ಲದರ ಶ್ರೇಯಸ್ಸು ಕಮಿಷನರ್ ತ್ಯಾಗರಾಜನ್ ಹಾಗೂ ಡಿಸಿಪಿ ವಿಕ್ರಂ ಅಮಟೆ ಅವರಿಗೆ ಸಲ್ಲಬೇಕಿದೆ, ಸದ್ಯ ಈಗಲಾದರೂ ಕೂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚೆತ್ತು ಜಿಲ್ಲೆಯ ಇತರೆ ಭಾಗಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.