ಹುಬ್ಬಳ್ಳಿ: ವೈದ್ಯರ ವಿರುದ್ಧ ಪತ್ನಿ ದೂರು: ಡಾ.ಕ್ರಾಂತಿಕಿರಣ ವಿರುದ್ಧ ಪತ್ನಿ ಶೋಭಾರಿಂದ ಜೀವ ಬೆದರಿಕೆ ಪ್ರಕರಣ ದಾಖಲು
ಧಾರವಾಡ: ಖ್ಯಾತ ವೈದ್ಯರೊಬ್ಬರ ಪತ್ನಿ ನನ್ನ ಕೊಲೆ ಮಾಡಿಸಲು ನನ್ನ ಪತಿಯೇ ಸುಪಾರಿ ಕೊಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪತ್ನಿಯೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಘಟನೆ ಈಗ ಹುಬ್ಬಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬಾಲಾಜಿ ಆಸ್ಪತ್ರೆಯ ಮುಖ್ಯಸ್ಥರಾಗಿರು ಡಾ.ಕ್ರಾಂತಿಕಿರಣ ಅವರ ಪತ್ನಿಯಾದ ಡಾ.ಶೋಭಾ ಸುಣಗಾರರವರು ಪತಿಯ ವಿರುದ್ಧ ಜೀವ ಬೆದರಿಕೆ ದೂರು ನೀಡಿದ್ದಾರೆ. ತನ್ನ ಪತಿಯ ಜೊತೆ ಮೂರ್ನಾಲ್ಕು ವರ್ಷದಿಂದ ಕೌಟುಂಬಿಕ ಭಿನ್ನಾಭಿಪ್ರಾಯಗಳಿದ್ದು, ಈ ಕಾರಣಕ್ಕೆ ನನ್ನ ಹೆಸರಿನಲ್ಲಿರುವ ಆಸ್ತಿಯನ್ನ ಬಿಟ್ಟು ಕೊಡುವಂತೆ ಪೀಡಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತನ್ನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸುವ ಜೀವ ಬೆದರಿಕೆ ಹಾಕಿದ್ದಲ್ಲದೇ, ಜೋರಾಗಿ ಗೋಡೆಗೆ ದೂಡಿ, ಒಳಪೆಟ್ಟು ಆಗುವಂತೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬಾಲಾಜಿ ಆಸ್ಪತ್ರೆಯ ಅಕೌಂಟೆಂಟ್ ಮಹೇಶ್ವರಿ ಹೊಸಗೌಡರ ಕೂಡಾ ಜೀವ ಬೆದರಿಕೆ ಹಾಕಿದ್ದಾರೆಂದು ಡಾ.ಶೋಭಾ ಸುಣಗಾರ ದೂರು ನೀಡಿದ್ದಾರೆ.
ಇನ್ನೂ ಪ್ರಕರಣ ದಾಖಲು ಮಾಡಿಕೊಂಡಿರುವ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು ಈಗ ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದಾರೆ. ಆದರೆ ಕೆಲವು ದಿನಗಳ ಹಿಂದೆಯಷ್ಟೇ ಡಾ. ಕ್ರಾಂತಿಕಿರಣರವರು ಪತ್ನಿ ಶೋಭಾ ವಿರುದ್ಧ ಜೀವ ಬೆದರಿಕೆ ಪ್ರಕರಣ ದಾಖಲು ಮಾಡಿರುವುದು ಕೂಡಾ ಇಲ್ಲಿ ಸ್ಮರಿಸಬಹುದಾಗಿದೆ.