Uncategorized

ಹಲ್ಲೆಗೊಳಗಾಗಿದ್ದ ಚಿಕನ್ ಅಂಗಡಿ ಮಾಲೀಕನಿಗೆ ಆಕ್ಸಿಡೆಂಟ್: ಪೊಲೀಸರ ರಾಜಿ ಸಂಧಾನದ ಫಲ

ಬೆಳಗಾವಿ: ಕಳೆದ ಕೆಲ ದಿನಗಳ ಹಿಂದೆ ಬ್ರಹ್ಮ ಲಿಂಗೇಶ್ವರ ದೇವಸ್ಥಾನದ ಪೂಜಾ ಸಮಯದಲ್ಲಿ ಚಿಕನ್ ಸೆಂಟರ್ ಓಪನ್ ಇದೆ ಎಂದು ಎಂದು ಅಂಗಡಿಯ ಮಾಲೀಕ ಹಾಗೂ ಕಾರ್ಮಿಕನ ಮೇಲೆ ಹಲ್ಲೆ ನಡೆಸಲಾಗಿತ್ತು, ಈ ಘಟನೆ ಮಾಳ ಮಾರುತಿ ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಂತೆ ಇನ್ಸ್ ಪೆಕ್ಟರ್ ರಾಜಿ ಸಂಧಾನ ಮಾಡಿಸಿ ಕೈ ತೊಳೆದುಕೊಂಡಿದ್ದರು.

ಸದ್ಯ ಕಳೆದ ರಾತ್ರಿ ಚಿಕನ್ ಸೆಂಟರ್ ಮಾಲೀಕ ಹಸನ್ ಸಾಬ್ ಹಾಗೂ ಆತನ ಪತ್ನಿ ಬೈಕ್ ನಲ್ಲಿ ಬೆಳಗಾವಿಯಿಂದ ಯಮನಾಪುರದ ತಮ್ಮ ಮನೆಗೆ ಹೋಗುತ್ತಿರುವುವಾಗ ಅಪರಿಚಿತ ವಾಹನ ಅವರಿಗೆ ಡಿಕ್ಕಿ ಹೊಡೆದಿದೆ. ತೀವ್ರ ಪೆಟ್ಟಾಗಿ ಬಿದ್ದಿದ್ದ ಗಂಡ ಹೆಂಡತಿಯನ್ನ ಸ್ಥಳೀಯರು ಉಪಚರಿಸಿ ಕೂಡಲೇ ಸರ್ಕಾರಿ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ

ಸದ್ಯ ಚಿಕಿತ್ಸೆ ಪಡೆಯುತ್ತಿರುವ ಹಸನ್ ಸಾಬ್ ಕಾಲಿಗೆ ಗಂಭೀರ ಗಾಯವಾಗಿದ್ದು ಪತ್ನಿ ಸುರಕ್ಷಿತವಾಗಿ ಇದ್ದಾಳೆ. ಇನ್ನು ಘಟನೆ ಕುರಿತು ಭಯಬಿತರಾಗಿರುವ ಇವರು ತಮ್ಮ ಮೇಲೆ ಕೊಲ್ಲುವ ಪ್ರಯತ್ನ ನಡೆದಿದೆ ಎಂದು ಅನುಮಾನಿಸುತ್ತಿದ್ದಾರೆ.

ಸದ್ಯ ಪ್ರಾಥಮಿಕ ವರದಿ ದಾಖಲಿಸಿಕೊಂಡಿರುವ ಪೊಲೀಸರು ಆಕ್ಸಿಡೆಂಟ್ ಹಿಟ್ ಅಂಡ್ ರನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳು ಯಾರು ಎಂದು ಪತ್ತೆ ಮಾಡಬೇಕಿದೆ, ಒಂದು ವೇಳೆ ಉದ್ದೇಶಪೂರ್ವಕ ಆಕ್ಸಿಡೆಂಟ್ ಇದಾಗಿದ್ದರೆ ಮುಂದಿನ ದಿನಗಳಲ್ಲಿ ಕೂಡ ಹಸನ್ ಸಾಬ್ ಕುಟುಂಬಕ್ಕೆ ಆಪತ್ತು ತಪ್ಪಿದ್ದಲ್ಲಾ.

Related Articles

Leave a Reply

Your email address will not be published. Required fields are marked *

Back to top button