ಅರಣ್ಯ ಅಧಿಕಾರಿಗಳಿಗೆ ಮಾಹಿತಿ ರವಾನೆ ಶಂಕೆ : ಮಹಿಳೆ ಮೇಲೆ ಹಲ್ಲೆ ?
ಉಡುಪಿ: ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನೆ ನೀಡಿದ್ದಾರೆ ಎಂದು ಶಂಕೆ ಹಿನ್ನಲೆ ಮಹಿಳೆಗೆ ಹಲ್ಲೆ ಮಾಡಿದ ಘಟನೆ ಬೈಂದೂರು ತಾಲ್ಲೂಕಿನಲ್ಲಿ ನಡೆದಿದೆ. ಕುಂಜಳ್ಳಿ ನಿವಾಸಿ ಸವಿತಾ ಶೆಟ್ಟಿ ಎಂಬುವರು ಆರೋಪಿಗಳಿಂದ ಹಲ್ಲೆಗೊಳಗಾದ ಮಹಿಳೆ ಎಂದು ತಿಳಿದು ಬಂದಿದೆ.
ಬೈಂದೂರು ತಾಲೂಕು ಯಡ್ತರೆ ಗ್ರಾಮದ ಮುದ್ದೋಡಿ ಸಮೀಪದ ಕುಂಜಳ್ಳಿಯ ಮಹಿಳೆ ಸವಿತಾ ಶೆಟ್ಟಿ ಹಲ್ಲೆಗೆ ಒಳಗಾದವರು ಮತ್ತು ಕೆಲವು ದಿನಗಳ ಹಿಂದೆ ಕಡವೆ ಕೊಂದು ಮಾಂಸ ಸಾಗಿಸುತ್ತಿದ್ದಾಗ ಆರೋಪಿಗಳ ಬಂಧನವಾಗಿತ್ತು ಹಾಗೂ ಮಾಂಸ ಸಾಗಾಟ ಮಾಡುವಾಗಲೇ ರೆಡ್ ಹ್ಯಾಂಡ್ ಆಗಿ ಆರೋಪಿಗಳು ಸಿಕ್ಕಿಬಿದ್ದಿದ್ದರು ಈ ಹಿನ್ನಲೆ ಪ್ರಕರಣದಲ್ಲೊ 2 ದ್ವಿಚಕ್ರ ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು ಮತ್ತು
ಬೈಂದೂರಿನಿಂದ ಕುಂಜಳ್ಳಿಗೆ ಹೋಗುವ ರಸ್ತೆಯ ಮಾರ್ಗ ಮದ್ಯೆ ಇಲಾಖೆ ಕಾರ್ಯಚರಣೆ ನಡೆಸಿತ್ತು ಹಾಗೂ ಯಡ್ತರೆ ನಿವಾಸಿ ಮಮ್ಮಿಶಾಹ್ ಫೈಜಲ್, ಖರುರಿ ನಿಜಾಮುದ್ದೀನ್ ಬಂಧಿಯಾಗಿದ್ದರು.
ಕೃತ್ಯದಲ್ಲಿ ಭಾಗಿಯಾಗಿದ್ದ ಹೆರಿಯಣ್ಣ ಶೆಟ್ಟಿ, ಪ್ರವೀಣ್ ಶೆಟ್ಟಿ, ಇತರರು ತಪ್ಪಿಸಿಕೊಂಡಿದ್ದರು ಎಂದು ಇದೀಗ ಮಾಹಿತಿ ಹೋರಗೆ ಬಿದ್ದಿದೆ ಹಾಗೂ ಕಡವೆ ಮಾಂಸದ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಸವಿತಾ ಶೆಟ್ಟಿ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳೀಯ ನಿವಾಸಿ ಸುಬ್ಬು ಎಂಬಾತ, ಸವಿತಾ ಶೆಟ್ಟಿಗೆ ಅವಾಚ್ಯವಾಗಿ ನಿಂದಿಸಿ, ಮರದದಿಮ್ಮಿಯಿಂದ ಗಂಭೀರ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು ಗಾಯಗೊಂಡ ಸವಿತಾ ಶೆಟ್ಟಿ ಬೈಂದೂರು ಸರ್ಕಾರೀ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಹಾಗೂ ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.