ತಂದೆಯ ಕೊಲೆಯ ಸೇಡಿಗಾಗಿ ವ್ಯಕ್ತಿಯ ತೆಲೆ ಮೇಲೆ ಕಲ್ಲುಹಾಕಿ ಹತ್ಯೆಗೈದ ಯುವಕ
ಕಲಬುರಗಿ: ತಂದೆಯ ಕೊಲೆ ಸೇಡು ತಿರಿಸಿಕೊಳ್ಳಲು ವ್ಯಕ್ತಿಯ ತಲೆ ಮೇಲೆ ಕಲ್ಲು ಹಾಕಿ ಬರ್ಬರ ಕೊಲೆಗೈದ ಘಟನೆ ಚಿಂಚೋಳಿ ತಾಲ್ಲೂಕಿನ ದೇಗಲಮಡಿ ಗ್ರಾಮದಲ್ಲಿ ನಡೆದಿದೆ.
ದೇಗಲಮಡಿ ಗ್ರಾಮದ ರಾಜಕುಮಾರ್ (35) ಕೊಲೆಯಾದ ವ್ಯಕ್ತಿ. ಇದೆ ಗ್ರಾಮದ ಮಹೇಶ್ ಎಂಬಾತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ರಾಜಕುಮಾರ ಈ ಹಿಂದೆ ಮಹೇಶ್ನ ತಂದೆಯನ್ನ ಕೊಲೆ ಮಾಡಿದ್ದ, ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ರಾಜಕುಮಾರ ಕೆಲ ದಿನಗಳ ಹಿಂದಷ್ಟೆ ಜಾಮೀನಿನ ಮೇಲೆ ಹೊರಬಂದಿದ್ದ, ಬಂದವನು ಗ್ರಾಮದಲ್ಲಿ ಮತ್ತೆ ಪುಡಾರಿತನ ನಡೆಸಿದ್ದನಂತೆ, ಗ್ರಾಮದ ದೇವಸ್ಥಾನ ಮತ್ತಿತರಡೆ ಕುಳಿತ ಜನರನ್ನು ಬೇದರಿಸಿ ಕಳಿಸುವದು ಮಾಡುತ್ತಿದ್ದನಂತೆ. ಇದಲ್ಲದೆ ನಿನ್ನೆ ತಡರಾತ್ರಿ ಕುಡಿದ ನಶೆಯಲ್ಲಿ ಮಹೇಶನ ಮನೆಗೆ ತೆರಳಿ ಗಲಾಟೆ ತೆಗೆದಿದ್ದ, ಸಮಜಾಯಿಸಿ ಕಳಿಸಿದರೂ ಇಂದು ಬೆಳಗ್ಗೆ ಮತ್ತೆ ಮಹೇಶನ ಮನೆಗೆ ನುಗ್ಗಿ ರಾಜಕುಮಾರ್ ಗಲಾಟೆ ಮಾಡಿದ್ದಾನೆ.
ಇದರಿಂದ ರೊಚ್ಚಿಗೆದ್ದ ಮಹೇಶ ರಾಜಕುಮಾರನ ತೆಲೆಯ ಮೇಲೆ ಕಲ್ಲುಹಾಕಿ ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.