Uncategorized
Kalburgi Crime News: ರೌಡಿಗಳ ಮದ್ಯೆ ಜಗಳ: ಮನೆಗೆ ನುಗ್ಗಿ ಯುವಕನ ಹತ್ಯೆ
ಕಲಬುರಗಿ: ಪುಡಿ ರೌಡಿಗಳ ಗ್ಯಾಂಗ್ವೊಂದು ಮನೆಗೆ ನುಗ್ಗಿ ಯುವಕನ ಹತ್ಯೆಗೈದ ಘಟನೆ ಇಲ್ಲಿನ ಡಬರಾಬಾದ್ ಬಡಾವಣೆಯಲ್ಲಿ ನಡೆದಿದೆ.
ಮಹೇಶ್ (22) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಕೊಲೆ ಮಾಡಲಾಗಿದೆ. ಈ ವೇಳೆ ಮಹೇಶನ ಸಹೋಧರ ಕಿರಣ ಎಂಬಾತನಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪುಡಿರೌಡಿ ಸಾಗರ ಹಾಗೂ ಆತನ ಸಹಚರರು ಕೊಲೆಗೈದಿದ್ದಾರೆ ಅಂತ ಮೃತ ಮಹೇಶನ ಕುಟುಂಬಸ್ಥರು ಆರೋಪಿಸಿದ್ದಾರೆ.
ಬಡಾವಣೆಯಲ್ಲಿ ಮೃತ ಮಹೇಶ ಹಾಗೂ ಸಾಗರ ಇಬ್ಬರು ಪುಡಿರೌಡಿಗಳಾಗಿದ್ದು, ಎರಡು ಗುಂಪುಗಳನ್ನು ಕಟ್ಟಿಕೊಂಡಿದ್ದರು. ಎರಡು ಗುಂಪುಗಳ ನಡುವೆ ಒಳ ಜಗಳ ಇತ್ತು. ಏರಿಯಾದಲ್ಲಿ ರೌಡಿಸಂ ನಲ್ಲಿ ಹವಾ ಮೆಂಟೆನ್ ಮಾಡೋದಕ್ಕೆ ಎರಡು ಗುಂಪುಗಳ ಮಧ್ಯೆ ಗ್ಯಾಂಗ್ ವಾರ್ ನಡೆದಿತ್ತು. ಮುಂದುವರೆದ ಭಾಗವಾಗಿ ಮಹೇಶನ ಕೊಲೆ ಆಗಿದೆ ಎನ್ನಲಾಗುತ್ತಿದೆ.
ಈ ಕುರಿತು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಲವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.