Uncategorized
ದೇವಸ್ಥಾನಕ್ಕೆ ಹೋಗಿ ಬರುವದಾಗಿ ಹೇಳಿ ಹೋದ ಯುವಕ ಗಾರ್ಡನ್ ನಲ್ಲಿ ಶವವಾಗಿ ಪತ್ತೆ
ಕಲಬುರಗಿ: ಮೈಲಾಪುರ ಮಲ್ಲಯ್ಯ ದೇವರಿಗೆ ಹೋಗಿ ಬರುವದಾಗಿ ಮನೆಯಿಂದ ಹೊರಟಿದ್ದ ಯುವಕ ಹೌಸಿಂಗ್ ಬೋರ್ಡ್ ಕಾಲೋನಿಯ ಉದ್ಯಾನವನದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಕಿರಣ್ ಹೊಸಮನಿ (17) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಮನೆ ಹತ್ತಿರದ ಗಾರ್ಡನ್ ನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.
ನಿನ್ನೆ ರಾತ್ರಿ ಮನೆಯಿಂದ ಹೊರಡುವಾಗ ಯಾದಗಿರಿ ಜಿಲ್ಲೆಯ ಮೈಲಾಪುರ ಮಲ್ಲಯ್ಯ ದೇವಸ್ಥಾನಕ್ಕೆ ಹೋಗುವದಾಗಿ ಹೇಳಿಹೋಗಿದ್ದನಂತೆ, ತಡೆರಾತ್ರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಕೊಲೆಗೆ ಕಾರಣ ಏನು? ಕೊಲೆಗಡುಕರು ಯಾರು? ಎಂಬುದು ಪತ್ತೆಯಾಗಿಲ್ಲ.
ಈ ಕುರಿತು ಎಮ್ ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಪೋಲಿಸರು ಬಲೆ ಬಿಸಿದ್ದಾರೆ.