Uncategorized

ಹುಬ್ಬಳ್ಳಿಯಲ್ಲಿ ಪತ್ನಿಯಿಂದ ಪತಿಗೆ ಜೀವ ಬೆದರಿಕೆ ಆರೋಪ: ಪತ್ನಿಯ ವಿರುದ್ಧ ದೂರು ದಾಖಲಿಸಿದ ವೈದ್ಯ

ಧಾರವಾಡ: ಖ್ಯಾತ ವೈದ್ಯ ಹಾಗೂ ಖಾಸಗಿ ಅಸ್ಪತ್ರೆಯವೊಂದರ ಮುಖ್ಯಸ್ಥರಾಗಿರುವ ವೈದ್ಯರೊಬ್ಬರಿಗೆ ಪತ್ನಿಯಿಂದ ಜೀವ ಬೆದರಿಕೆ ಹಾಕಿರುವ ಆರೋಪ ಈಗ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೇಳಿ ಬಂದಿದೆ. ಪತ್ನಿಯ ವಿರುದ್ಧ ಈಗ ವೈದ್ಯ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.‌

ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಾದ ಬಾಲಾಜಿ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಡಾ. ಕ್ರಾಂತಿಕಿರಣ ಅವರಿಗೆ ಅವರ ಪತ್ನಿಯೇ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ನನಗೆ ಪತ್ನಿಯೇ ಜೀವ ಬೇದರಿಕೆ ಹಾಕಿದ್ದಾರೆ ಎಂದು ಡಾ. ಕ್ರಾಂತಿಕಿರಣ ವಿದ್ಯಾನಗರ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ.

ಹುಬ್ಬಳ್ಳಿಯ ಶಿರೂರ ಪಾರ್ಕ್ ಪ್ರದೇಶದಲ್ಲಿರುವ ಮನೆಗೆ ನುಗ್ಗಿ‌ ನಮ್ಮ ಮೇಲೆ ಕೈಯಿಂದ ಹಾಗೂ ಛತ್ರಿಯಿಂದ ಹೊಡೆದು ಪತ್ನಿ ಶೋಭಾ ಸುಣಗಾರ ಜೀವ ಬೆದರಿಕೆ ಹಾಕಿದ್ದಾರೆ. ಜೊತೆಗೆ ಮಕ್ಕಳ ಎದುರಿಗೆ ಶೋಭಾ ಸುಣಗಾರ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಡಾ.ಕ್ರಾಂತಿಕಿರಣ ಉಲ್ಲೇಖ ಮಾಡಿದ್ದಾರೆ.

ಈಗಾಗಲೇ ಡಾ.ಕ್ರಾಂತಿಕಿರಣ ಹಾಗೂ ಪತ್ನಿ ಶೋಭಾ ಸುಣಗಾರವರು ಕಳೆದ ಮೂರು ವರ್ಷಗಳಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದು, ಪತ್ನಿಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದಾರೆಂಬುದನ್ನ ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ವಿದ್ಯಾನಗರ ಠಾಣೆ ಪೊಲೀಸರು, ಶೋಭಾ ಸುಣಗಾರರ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

Related Articles

Leave a Reply

Your email address will not be published.

Back to top button