ಬಾಗಲಕೋಟೆ: ಟ್ಯೂಷನ್ ಗೆ ಹೋಗಿದ್ದ ಬಾಲಕಿ ಅಪಹರಣ: ಜೂಜುಕೋರ ಮಾವನಿಂದಲೇ ಕಿಡ್ನ್ಯಾಪ್ ಶಂಕೆ..?
ಬಾಗಲಕೋಟೆ: ಟ್ಯೂಷನ್ ಗೆ ಹೋಗಿದ್ದ 7 ವರ್ಷದ ಬಾಲಕಿಯನ್ನು ಅಪಹರಣ ಮಾಡಿರುವ ಘಟನೆ ನಡೆದಿದೆ. ನವನಗರದ 61 ನೇ ಸೆಕ್ಟರ್ ನಲ್ಲಿ ಘಟನೆ ನಡೆದಿದ್ದು. ಕೃತಿಕಾ ಕೊಡಗಾನೂರ ಅಪಹರಣವಾಗಿರುವ ಬಾಲಕಿಯಾಗಿದ್ದಾಳೆ.
ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತಿಕಾ, ತಿಪ್ಪಣ್ಣ ಕೊಡಗಾನೂರು ಹಾಗೂ ಸುನಿತಾ ಎಂಬುವರ ಮಗಳಾಗಿದ್ದು. ಬಾಲಕಿ ಮಾವ ಅನಿಲ್ ಬಾಡಗಂಡಿ ಎಂಬಾತನಿಂದಲೇ ಅಪಹರಣ ಮಾಡಿರುವ ಸಂಶಯ ವ್ಯಕ್ತವಾಗಿದೆ.
ಅಪಹರಣ ಮಾಡಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಮಾಹಿತಿಯಿದ್ದು. ಕಿಡ್ನಾಪ್ ಮಾಡುವುದಕ್ಕೆ ಬಿಹಾರ ಮೂಲದ ಕೆಲವರನ್ನು ಬಳಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಟ್ಯೂಷನ್ ಗೆ ಹೋಗಿ ಬರುವ ವೇಳೆ ಚಾಕಲೇಟ್ ಕೊಡುವ ನೆಪ ಮಾಡಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.
ಅನಿಲ ಬಾಡಗಂಡಿ ಹಾಗೂ ನಾಲ್ವರು ಸಹಚರರಿಂದ ಅಪಹರಣವಾಗಿರುವ ಮಾಹಿತಿಯಿದ್ದು.ಅನಿಲ್ ಬಾಡಗಂಡಿ ಕ್ಯಾಸಿನೊ,ಇಸ್ಪಿಟ್ ದಾಸನಾಗಿದ್ದನು.ಇತ್ತೀಚೆಗೆ ಸಾಕಷ್ಟು ಹಣ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದನಂತೆ. ರಾತ್ರಿಯಿಡೀ ಬಾಲಕಿ ಹುಡುಕಾಟದಲ್ಲಿ ನವನಗರ ಪೊಲೀಸರು ತೊಡಗಿದ್ದು. ಈ ಸಂಬಂಧ ನವನಗರ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.
ನಿನ್ನೆ ರಾತ್ರಿ 8 ಗಂಟೆ ವೇಳೆಗೆ ಕಿಡ್ನಾಪ್ ಆಗಿದ್ದು, ಬಾಲಕಿ ತಾಯಿ ಹಾಗೂ ಸಹೋದರನನ್ನು ವಿಚಾರಣೆ ನಡೆಸಿದ್ದಾರೆ. ಬಾಲಕಿ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.