Uncategorized
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೃಷಿಕರಿಗೆ ನೋಟಿಸ್ ಜಾರಿ
ಚಿಕ್ಕಮಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವ್ಯಾಪ್ತಿಯ ಹಲವು ಮಂದಿ ಕೃಷಿಕರಿಗೆ ಭೂಕಬಳಿಕೆ ನಿಷೇಧ ನ್ಯಾಯಾಲಯ ನೋಟಿಸ್ ಜಾರಿಯಾಗಿದೆ.
ಸಂಸೆ ಗ್ರಾಮದ ಕೆಂಗನಕೊಂಡದ ಕೃಷಿಕರಿಗೆ ನೋಟಿಸ್ ತಲುಪಿದ್ದು, ಇದೇ ಅ.30ರಂದು ಹಾಜರಾಗಿ ಸಮಜಾಯಿಸಿ ನೀಡುವಂತೆ ತಿಳಿಸಲಾಗಿದೆ.
ಹಲವು ವರ್ಷಗಳಿಂದ ಕೃಷಿ ಮಾಡುತ್ತಿದ್ದೇವೆ. ಆದರೆ ಉದ್ಯಾನವನ ಘೋಷಣೆಯಾದ ಬಳಿಕ ಕೆಲವೊಂದು ಸಮಸ್ಯೆಗಳು ಸೃಷ್ಟಿಯಾಗಿವೆ ಫಾರಂ ನಂ.50/53ರಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ನಿರಂತರ ಹೋರಾಟದ ಫಲವಾಗಿ ಕೆಲವರಿಗೆ ಹಕ್ಕುಪತ್ರ ಸಿಕ್ಕಿವೆ. ಆದರೆ ಈಗ ಅರಣ್ಯ ಇಲಾಖೆ ಹಕ್ಕುಪತ್ರ ನೀಡಿಕೆ ನಿಯಮಬಾಹಿರ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ
ಅರಣ್ಯ ಮತ್ತು ಕಂದಾಯ ಇಲಾಖೆ ನಡುವಿನ ಗೊಂದಲದಿಂದಾಗಿ ಕೃಷಿಕರು ಅನಗತ್ಯ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಒದಗಿಸಿ, ಕೃಷಿಕರಿಗೆ ನೆರವಾಗಬೇಕು ಎಂದು ಆಗ್ರಹಿಸಿದ್ದಾರೆ.