Uncategorized

ಗ್ರಾಮ ಪಂಚಾಯಿತಿಯಲ್ಲೂ ಪ್ರತಿಧ್ವನಿಸಿದ ʼಮತಾಂತರʼ ವಿಷಯ

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಸಭೆಯಲ್ಲಿ ಮತಾಂತರ ವಿಷಯ ಪ್ರಸ್ತಾಪಗೊಂಡು, ಚರ್ಚೆಯಾಗಿ, ಕ್ರಮ ಕೈಗೊಳ್ಳುವ ನಿರ್ಣಯ ಕೈಗೊಂಡಿರುವುದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಂತೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಅಭಿವೃದ್ಧಿ ಬಗ್ಗೆ ಚರ್ಚೆ ನಡೆದ ಬಳಿಕ ಹಂತೂರು ಸಹಕಾರಿ ಸಂಘದ ಉಪಾಧ್ಯಕ್ಷ ಜಾಣಿಗೆ ಮೋಹನ್ ಮಾತನಾಡಿ, ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಹಿಂದೂ ಧರ್ಮೀಯರನ್ನು ಮತಾಂತರ ಮಾಡುವ ಧಂದೆ ನಡೆಯುತ್ತಿದೆ. ಈಗಾಗಲೆ ಕೆಲವರು ಹಣದ ಆಮಿಷಕ್ಕೆ ಮತಾಂತರಗೊಡಿದ್ದಾರೆ. ಅವರನ್ನು ಮಾತೃಧರ್ಮಕ್ಕೆ ಮರಳಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಇದಕ್ಕೆ ಗ್ರಾಪಂ ಉಪಾಧ್ಯಕ್ಷ ಕಣಚೂರು ವಿನೋದ್ ಪ್ರತಿಕ್ರಿಯಿಸಿ, ಗ್ರಾಮ ಸಭೆಯಲ್ಲಿ ಈ ವಿಚಾರವನ್ನು ನಿರ್ಣಯ ಕೈಗೊಂಡು ಗಂಭಿರವಾಗಿ ಈ ವಿಷಯದ ಬಗ್ಗೆ ಕ್ರಮ ಜರುಗಿಸಲಾಗುವುದು. ಮತಾಂತರಕ್ಕೆ ಸಂಬಂಧಿಸಿದಂತೆ ಗುಪ್ತ ಸಭೆಗಳು ಏನಾದರೂ ಕಂಡಲ್ಲಿ ನಮ್ಮ ಗಮನಕ್ಕೆ ತನ್ನಿ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಷಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಪಟೇಲ್ ರಮೇಶ್, ಆದರ್ಶ್, ವಿಜಯ್ ಹಾಗೂ ಸರ್ವಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button