Uncategorized

ಭೂಮಿ ಹಕ್ಕುಪತ್ರ ನೀಡಲು ವಿಳಂಬ: ಕೊಪ್ಪದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ರೈತರಿಗೆ ಭೂ ಮಂಜೂರಾತಿ ಹಕ್ಕುಪತ್ರ ನೀಡಲು ತಾಲೂಕು ಆಡಳಿತ ವಿಳಂಬ ಧೊರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕೊಪ್ಪ ತಹಸೀಲ್ದಾರ್ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಫಾರ್ಮ್ ನಂ.50/53 ಹಾಗೂ 94ಸಿ ಭೂ ಮಂಜೂರಾತಿ ಸಾಗುವಳಿ ಚೀಟಿ ನೀಡಲು ಅರಣ್ಯ ಇಲಾಖೆ ಅಭಿಪ್ರಾಯ ಬೇಕಾಗಿದೆ ಎಂದು ಹೇಳುತ್ತಾ ಹಕ್ಕುಪತ್ರ ನೀಡದೆ ತಡೆ ಹಿಡಿಯಲಾಗಿದೆ. ಕೆಲವರಿಗೆ ಹಕ್ಕುಪತ್ರ ಸಿಕ್ಕಿದ್ದರೂ ಪಹಣಿ ದಾಖಲಾತಿ ನೀಡಲು ವಿಳಂಬ ಮಾಡಲಾಗುತ್ತಿದೆ. ಕೃಷಿಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಶಾಸಕ ಟಿ ಡಿ ರಾಜೇಗೌಡ ಸ್ಥಳಕ್ಕಾಗಮಿಸಿ ತಹಸೀಲ್ದಾರರೊಂದಿಗೆ ಮಾತನಾಡಿ, ಮರಗಳನ್ನು ಅರಣ್ಯ ಇಲಾಖೆಯ ಷರತ್ತಿಗೆ ಒಳಪಡಿಸಿ ಹಕ್ಕುಪತ್ರ ಕೊಡುವುದರೊಂದಿಗೆ ಪಹಣಿ ಕ್ರಮ ಸಂಖ್ಯೆಯನ್ನು ಆದ್ಯತೆ ಮೇಲೆ ಕೂಡಲೇ ದಾಖಲಿಸಿಕೊಡಬೇಕೆಂದು ಆದೇಶಿಸಿದರು.

ಇದಕ್ಕೆ ತಹಸೀಲ್ದಾರ್ ಒಪ್ಪಿಕೊಂಡ ನಂತರ ರೈತರು ಪ್ರತಿಭಟನೆಯನ್ನು ಕೈಬಿಟ್ಟರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೋಳ್ಳಿ, ಎಚ್ ಎಂ ಸತೀಶ್, ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರಾದ ಎ ಸಿ ವಜ್ರಪ್ಪ, ಶಶಿಕುಮಾರ್, ರವೀಂದ್ರ, ನಾಗೇಶ್, ರತ್ನಾಕರ್ ಮತ್ತಿತರರು ಇದ್ದರು.

Related Articles

Leave a Reply

Your email address will not be published.

Back to top button