Uncategorized

ಉಡುಪಿ: ಮಾರುತಿ ವೀಥಿಕ ರಸ್ತೆಯಲ್ಲಿ ಪುನೀತ್ ಭಾವಚಿತ್ರ ಇಟ್ಟು ಶ್ರದ್ಧಾಂಜಲಿ

ಉಡುಪಿ: ನಟ ಪುನೀತ್ ರಾಜಕುಮಾರ್ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ನಗರದ ಮಾರುತಿ ವೀಥಿಕ ರಸ್ತೆಯಲ್ಲಿ, ಪುನೀತ್ ಭಾವಚಿತ್ರ ಇಟ್ಟು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಡಾ. ರಾಜಕುಮಾರ್ ಅಭಿಮಾನಿ ಸಂಘದ ಸದಸ್ಯರು, ಪುನೀತ್ ಗುಣಗಾನ ಮಾಡಿ ಅಂತಿಮ ಪುಷ್ಪಾರ್ಚನೆ ಮಾಡಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲ ಓರ್ವ ಸಹೃದಯಿ ವ್ಯಕ್ತಿಯಾಗಿ ಪುನೀತ್ ಸಮಾಜಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಶ್ಲಾಘಿಸಿದ್ದಾರೆ.

ಈ ವೇಳೆ ಮಾತನಾಡಿದ ರಾಜ್ ಅಭಿಮಾನಿ ಸಂಘದ ಸದಸ್ಯ ಗಣೇಶ ರಾಜ್ ಸರಳೇಬೆಟ್ಟು, ಪುನೀತ್ ಜೊತೆಗಿನ ಭೇಟಿಯ ದಿನವನ್ನು ಭಾವಪೂರ್ಣವಾಗಿ ಸ್ಮರಿಸಿದರು. ಪುನೀತ್ ಕಾಲಾನಂತರ ಸಮಾಜಕ್ಕೆ ಅವರು ಕೊಟ್ಟಿರುವ ಕೊಡುಗೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕೇವಲ ಕಲಾಕ್ಷೇತ್ರಕ್ಕೆ ಮಾತ್ರವಲ್ಲ ಸಮಾಜದ ಕಷ್ಟಗಳಿಗೂ ಪುನೀತ್ ಸ್ಪಂದಿಸುತ್ತಿದ್ದ ರೀತಿ ಅನುಸರಣೀಯ ಎಂದು ಅಗಲಿದ ನಟನನ್ನು ಹಾಡಿಹೊಗಳಿದರು.

Related Articles

Leave a Reply

Your email address will not be published.

Back to top button