Uncategorized

ಕಾಫಿಬೀಜ ಬಳಸದೇ ಕಾಫಿಪುಡಿ ತಯಾರಿಕೆ; ಫಿನ್ಲ್ಯಾಂಡ್ ವಿಜ್ಞಾನಿಗಳ ಸಂಶೋಧನೆ

ಹೆಲ್ಸಿಂಕಿ: ಹವಾಮಾನ ಏರುಪೇರಿನಿಂದ ಕಾಫಿ ತೋಟಗಳಲ್ಲಿ ನಿರೀಕ್ಷಿತ ಪ್ರಮಾಣದ ಕಾಫಿಹಣ್ಣು ಸಿಗದಿದ್ದರೆ ಏನಂತೆ? ಅಂತಹ ಸಮಸ್ಯೆಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಈಗ ಕಾಫಿ ಬೀಜವನ್ನೇ ಬಳಕೆ ಮಾಡದೆ ಪ್ರಯೋಗಾಲಯದಲ್ಲೇ ಅತ್ಯುತ್ತಮ ಗುಣಮಟ್ಟದ ಕಾಫಿಯನ್ನು ಬೆಳೆಯುವ ಹೊಸ ಸಂಶೋಧನೆ ಮಾಡಿರುವುದಾಗಿ ಫಿನ್ಲ್ಯಾಂಡ್ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಈ ಹೊಸ ಸಂಶೋಧನೆಯಲ್ಲಿ ಕಾಫಿ ಬೀಜಗಳಿಂದ ಕಾಫಿ ಹುಡಿಯನ್ನು ಉತ್ಪಾದಿಸುವುದಿಲ್ಲ. ಬದಲಾಗಿ ನಿಕಟವಾಗಿ ನಿಯಂತ್ರಿಸಿದ ತಾಪಮಾನ, ಬೆಳಕು, ಆಮ್ಲಜನಕದ ವಾತಾವರಣ ಸೃಷ್ಟಿಸಿ ಬೆಳೆಸಲಾದ ಕಾಫಿ ಸಸ್ಯಗಳ ಜೀವಕೋಶದ ಸಮೂಹದಿಂದ ಕಾಫಿಪುಡಿ ತಯಾರಿಸಲಾಗುತ್ತದೆ. ಇದನ್ನು ಹುರಿದಾಗ ಸಾಂಪ್ರದಾಯಿಕ ಕಾಫಿಹುಡಿಯ ಸ್ವಾದವನ್ನೇ ಹೋಲುವ ಕಾಫಿಪುಡಿ ಲಭ್ಯವಾಗುತ್ತದೆ. ಈ ಉತ್ಪನ್ನದಲ್ಲಿ ಒರಿಜಿನಲ್ ಕಾಫಿ ಬಿಟ್ಟು ಬೇರೇನೂ ಇರುವುದಿಲ್ಲ ಎಂದು ವಿಜ್ಞಾನಿಗಳ ತಂಡದ ಸದಸ್ಯ ಹೆಲಿಕೊ ರೀಶರ್ ತಿಳಿಸಿದ್ದಾರೆ.

ಮಳೆ ಏರುಪೇರು, ಪ್ರವಾಹ ಪರಿಸ್ಥಿತಿ, ಭೂಕುಸಿತ ಇತ್ಯಾದಿ ಪ್ರಕೃತಿ ವಿಕೋಪಗಳಿಂದ ಇತ್ತೀಚೆಗೆ ಕಾಫಿ ತೋಟಗಳಲ್ಲಿ ಬೆಳೆ ನಿರ್ವಹಣೆ ಅತ್ಯಂತ ಕಠಿಣವಾಗುತ್ತಿದೆ. ಅಲ್ಲದೆ ಕಾಫಿಬೀಜವನ್ನು ಮಾರುಕಟ್ಟೆಗೆ ಸಾಗಿಸುವುದು, ದಾಸ್ತಾನು ಇಟ್ಟುಕೊಳ್ಳುವುದು ನಿರಂತರ ಸಮಸ್ಯೆಯಾಗುತ್ತಿದೆ. ಹೀಗಾಗಿ ಕಾಫಿ ಉದ್ಯಮಕ್ಕೆ ಪರ್ಯಾಯ ವ್ಯವಸ್ಥೆಯ ಅಗತ್ಯವಿದ್ದು, ಈ ಹೊಸ ಸಂಶೋಧನೆ ಸಹಕಾರಿಯಾಗಬಹುದು. ವಿಶ್ವದ ಜನರ ನೆಚ್ಚಿನ ಪೇಯಗಳಲ್ಲಿ ಒಂದಾಗಿರುವ ಕಾಫಿ ತಯಾರಿಕೆಗೆ ಈ ನೂತನ ಆವಿಷ್ಕಾರ ಹೆಚ್ಚಿನ ಅನುಕೂಲತೆ ಒದಗಿಸಲಿದೆ ಎಂದು ಅಭಿಪ್ರಾಯಿಸಿದ್ದಾರೆ.

ಫಿನ್ಲ್ಯಾಂಡಿನ ವಿಟಿಟಿ ತಾಂತ್ರಿಕ ಸಂಶೋಧನಾ ಕೇಂದ್ರದಲ್ಲಿ ಈ ನೂತನ ಆವಿಷ್ಕಾರ ನಡೆಸಲಾಗಿದೆ. ಪ್ರಯೋಗಾಲಯದಲ್ಲಿ ಮಾಂಸ ಉತ್ಪಾದಿಸುವ ಜೀವಕೋಶ ಕೃಷಿ ನಿಯಮವನ್ನು ಕಾಫಿಪುಡಿಯ ನೂತನ ಆವಿಷ್ಕಾರದಲ್ಲೂ ನಡೆಸಲಾಗಿದೆ. ಪ್ರಯೋಗಾಲಯದಲ್ಲೀ ಮಾಂಸ ಉತ್ಪಾದಿಸುವ ಜೀವಕೋಶ ಕೃಷಿ ನಿಯಮವನ್ನು ಕಾಫಿಪುಡಿ ಆವಿಷ್ಕಾರದಲ್ಲೂ ಬಳಸಲಾಗಿದೆ. ಸಾಂಪ್ರದಾಯಿಕ ಕಾಫಿಗಿಂತ ಇದು ಸ್ವಲ್ಪ ಕಹಿಯಾಗಿರುತ್ತದೆ. ಆದರೆ ಕಾಫಿಬೀಜ ಹುರಿಯುವ ಸಂದರ್ಭ ಇದಕ್ಕೆ ಕೆಲವೊಂದು ಪೂರಕ ವಸ್ತು ಸೇರಿಸಿ, ಕಹಿಯನ್ನು ಸಾಮಾನ್ಯ ಮಟ್ಟಕ್ಕೆ ಇಳಿಸಬಹುದು ಎಂದವರು ಹೇಳಿದ್ದಾರೆ.

ಪ್ರಯೋಗಾಲಯದಲ್ಲಿ ಬೆಳೆದ ಕಾಪಿಹುಡಿಗೆ ʼನವೀನ ಆಹಾರʼದ ಸ್ಥಾನಮಾನ ನೀಡಿರುವುದರಿಂದ ಸದ್ಯಕ್ಕೆ ಇದು ಜನಸಾಮಾನ್ಯರ ಬಳಕೆಗೆ ಲಭ್ಯವಿರುವುದಿಲ್ಲ. ವಿಶೇಷವಾಗಿ ತರಬೇತಿ ಪಡೆದ ರುಚಿ ತಜ್ಞರು ಮಾತ್ರ ಈಗ ಇದರ ರುಚಿಯನ್ನು ಪರೀಕ್ಷಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button