Uncategorized

ಅಂತಾರಾಷ್ಟ್ರೀಯ ಕಾಫಿ ದಿನ; ಉಚಿತ ಕಾಫಿ ವಿತರಣೆ

ಮಡಿಕೇರಿ: ಅಂತಾರಾಷ್ಟ್ರೀಯ ಕಾಫೀ ದಿನದ ಅಂಗವಾಗಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ವತಿಯಿಂದ ನಗರದಲ್ಲಿ ಕಾಫಿ ದಿನದ ಮಹತ್ವವನ್ನು ಸ್ವಾದಿಷ್ಟ ಕಾಫಿ ವಿತರಣೆಯೊಂದಿಗೆ ತಿಳಿಸುವ ಪ್ರಯತ್ನ ಜರುಗಿತು.

ನಗರದ ರಾಜಾಸೀಟ್‌ ರಸ್ತೆಯಲ್ಲಿನ ತಡಾ ಹೌಸ್ ನಲ್ಲಿ ಆಯೋಜಿತ ಕಾಫಿ ದಿನಾಚರಣೆಯನ್ನು ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ದೇವಯ್ಯ, ಕಾಫಿ ಕೃಷಿ ಸಂಕಷ್ಟದಲ್ಲಿದ್ದ ಸಂದರ್ಭ ಮಹಿಳೆಯರು ತಮ್ಮದೇ ಸಂಘವನ್ನು ಪ್ರಾರಂಭಿಸಿ ಕಾಫಿ ಬೆಳೆಗಾರರಿಗೆ ಧೈರ್ಯ ನೀಡುವದರೊಂದಿಗೆ ಕಾಫಿ ಸೇವನೆಗೆ ಉತ್ತೇಜನ ನೀಡುವ ಕಾರ್ಯಕ್ಕೆ ಮುಂದಾಗಿದ್ದು ಶ್ಲಾಘನೀಯ. ಕಾಫಿ ಕೃಷಿಗೆ ಎಂಥಹುದ್ದೇ ಸಂಕಷ್ಟ ಎದುರಾದರೂ ಮಹಿಳೆಯರು ಮನೆ, ಕುಟುಂಬ ನಿವ೯ಹಣೆಯೊಂದಿಗೆ ಕಾಫಿ ಕೃಷಿಯನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಚಾಣಕ್ಷತೆಯನ್ನು ಹೊಂದಿದ್ದಾರೆ ಎಂದು ಹೆಮ್ಮೆಯಿಂದ ನುಡಿದರು. ಕೊಡಗಿನ ಸ್ವಾದಿಷ್ಟ ಕಾಫಿಯನ್ನು ಜಗತ್ತಿನಲ್ಲಿಯೇ ಅತ್ಯುತ್ತಮ ಕಾಫಿ ಉತ್ಪಾದನೆಯಾಗಿ ರೂಪಿಸುವಲ್ಲಿ ಕೊಡಗಿನ ಪ್ರತೀ ಬೆಳೆಗಾರ ಕುಟುಂಬಗಳೂ ಕೈಜೋಡಿಸಬೇಕೆಂದು ದೇವಯ್ಯ ಮನವಿ ಮಾಡಿದರು.

ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಮಾತನಾಡಿ, ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕಾಫಿ ಸಹಕಾರ ಸಂಘ ಎಂಬ ಹೆಗ್ಗಳಿಕೆಯ ಕೊಡಗು ಕಾಫಿ ಸಂಘಕ್ಕಿದ್ದು, ಕೊಡಗಿನಲ್ಲಿ ಮಾತ್ರವಲ್ಲದೇ ಹುಣಸೂರಿನಲ್ಲಿಯೂ ಸಾಕಷ್ಟು ಮೌಲ್ಯವಿರುವ ಆಸ್ತಿಯಿದೆ. ಸೊಸೈಟಿ ವತಿಯಿಂದ ಕಾಫಿಯನ್ನು ಹೊರದೇಶಗಳಿಗೆ ರಫ್ತು ಮಾಡುವ ಯೋಜನೆಗೆ ಸರ್ಕಾರದ ಸಹಕಾರ ಅನಿವಾರ್ಯವಾಗಿದ್ದು, ಕಾಫಿ ಪುಡಿಯನ್ನು ಕೂಡ ರಫ್ತು ಮಾಡುವ ಚಿಂತನೆಗೆ ಸರ್ಕಾರದ ಆರ್ಥಿಕ ನೆರವು ಅಗತ್ಯವಾಗಿದೆ ಎಂದು ನುಡಿದರು.

ವಕೀಲ ಪಾಸುರ ಪ್ರೀತಂ ಮಾತನಾಡಿ, 2015 ರಿಂದ ಕಾಫಿ ಪಾನೀಯದ ಮಹತ್ವ ಸಾರಲು ಅಂತರರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸ್ವಾದಿಷ್ಟ ಕಾಫಿಯ ತಯಾರಿಕೆ ಹಿನ್ನಲೆಯಲ್ಲಿ ಪ್ರತೀಯೋರ್ವ ಬೆಳೆಗಾರನ ಶ್ರಮದ ಫಲವಿದೆ ಎಂದರು.

ಹಿರಿಯ ವೈದ್ಯಾಧಿಕಾರಿ ಡಾ.ಮೋಹನ್ ಅಪ್ಪಾಜಿ ಮಾತನಾಡಿ, 40 ವರ್ಷ ಮೇಲ್ಪಟ್ಟವರ ಆರೋಗ್ಯ ಸಂರಕ್ಷಣೆಗೆ ಕಾಫಿಯ ಸೇವನೆ ಉತ್ತಮವಾಗಿದ್ದು ದಿನಕ್ಕೆ 3-4 ಲೋಟ ಕಾಫಿ ಸೇವನೆ ಕೂಡ ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ. ಕಾಫಿಯಲ್ಲಿ ಆರೋಗ್ಯ ವರ್ಧನೆಯ ಸಾಕಷ್ಟು ಅಂಶಗಳಿದೆ. ಹೀಗಾಗಿ ಕಾಫಿ ಖಂಡಿತಾ ಮಾರಕವಾಗಿರದೇ ಮನುಷ್ಯನಿಗೆ ಉಪಯುಕ್ತ ಪೇಯವಾಗಿದೆ ಎಂದರು.

2:05 3-4 ಲೋಟ ಕಾಫಿ ಸೇವನೆ ಕೂಡ ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ. ಕಾಫಿಯಲ್ಲಿ ಆರೋಗ್ಯ ವರ್ಧನೆಯ ಸಾಕಷ್ಟು ಅಂಶಗಳಿದೆ. ಹೀಗಾಗಿ ಕಾಫಿ ಖಂಡಿತಾ ಮಾರಕವಾಗಿರದೇ ಮನುಷ್ಯನಿಗೆ ಉಪಯುಕ್ತ ಪೇಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಕಾಫಿ ಜಾಗ್ರತಿ ಸಂಘದ ಜಿಲ್ಲಾ ಅಧ್ಯಕ್ಷೆ ಚಿತ್ರಾ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಅನಿತಾ ನಂದ, ಜಂಟಿ ಕಾರ್ಯದರ್ಶಿ ಮುಕ್ಕಾಟೀರ ಜ್ಯೋತಿಕಾ ಬೋಪಣ್ಣ, ಕಾರುಗುಂದ ಘಟಕದ ಸಂಚಾಲಕಿ ಕುಟ್ಟೆಟೀರ ಕುಮಾರಿ ಕುಂಜಪ್ಪ, ಸದಸ್ಯರಾದ ಪಾಸುರ ಹೇಮ ಪ್ರೀತಂ, ಕುಟ್ಟೇಟಿರ ಗ್ರೇಸಿ ಉದಯ್, ಕೋಡೀರ ಸುಮನ್, ವಿಜಯಲಕ್ಷ್ಮಿ ಸುರೇಶ್, ನಿಶ ಮೋಹನ್ ಮತ್ತಿತರರಿದ್ದರು.

ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ ದಿನವಿಡೀ ಸಾರ್ವಜನಿಕರಿಗೆ ಸ್ವಾದಿಷ್ಟ ಮತ್ತು ಬಿಸಿಯಾದ ಕಾಫಿಯನ್ನು ಉಚಿತವಾಗಿ ನೀಡುವ ಮೂಲಕ ಕಾಫಿ ಪಾನೀಯದ ಮಹತ್ವ ತಿಳಿಸಲಾಯಿತು.

Related Articles

Leave a Reply

Your email address will not be published.

Back to top button