Uncategorized

ಹುಬ್ಬಳ್ಳಿಯ ಚೆನ್ನಮ್ಮ ಮೂರ್ತಿ ಪ್ರತಿಷ್ಠಾನೆಯ ಹಿಂದೆ ದೊಡ್ಡ ಹೊರಾಟವಿದೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ನಗರದ ಹೃದಯಭಾಗದಲ್ಲಿ ಸ್ಥಾಪಿತವಾಗಿರುವ ವೀರ ರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಹಿಂದೆ ದೊಡ್ಡ ಹೊರಾಟವಿದೆ. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಟ ಮಾಡಿದ ನಮ್ಮ ಹೆಮ್ಮೆಯ ಹೋರಾಗಾರರಲ್ಲಿ ಒಬ್ಬರಾದವರು ಕಿತ್ತೂರ ರಾಣಿ ಚೆನ್ನೆಮ್ಮ. ಬ್ರಿಟಿಷ್ ವಿರುದ್ಧ ಸ್ವತಂತ್ರ ಹೋರಾಟದ ರಣಕಹಳೆ ಊದಿದ ರಾಣ್ಣಿ ಚೆನ್ನಮ್ಮರವರ ಜಯಂತಿಯನ್ನು ನಾವೆಲ್ಲರು ಆಚರಿಸುತ್ತಿದ್ದೇವೆ. ಈಗಿನ ಹುಬ್ಬಳ್ಳಿ ಧಾರವಾಡ ಯುವಕರಿಗೆ ಹುಬ್ಬಳ್ಳಿಯ ಚೆನ್ನಮ್ಮ ಮೂರ್ತಿ ಸ್ಥಾಪನೆಯ ಕುರಿತು ಗೊತ್ತಿಲ್ಲ ಎನ್ನುವ ಮೂಲಕ ಮೂರ್ತಿ ಸ್ಥಾಪನೆ ಹಿಂದಿನ ರಹಸ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರೆದಿಟ್ಟರು.

ಹುಬ್ಬಳ್ಳಿಯ ಹೃದಯಭಾಗದಲ್ಲಿರುವ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದದ ಬಳಿಕ, ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಹುಬ್ನಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಮೇಯರ್ ಆಗಿದ್ದ ಪಿ ಹೆಚ್ ಪವಾರ ಹಾಗೂ ನಮ್ಮ ತಂದೆ ಎಸ್ ಆರ್ ಬೊಮ್ಮಾಯಿ ಅವರು ಉಸ್ತುವಾರಿ ಸಚಿವರಾಗಿದ್ದರು. ಅಂದು ಒಂದು ವರ್ಷಗಳ ಕಾಲ ಮೂರ್ತಿ ಪ್ರತಿಷ್ಠಾನೆ ಮಾಡಬೇಕೋ ಬೇಡವೋ ಎಂಬ ಚಿಂತನೆ ನಡೆಯಿತು. ಕೊನೆಗೆ ಮೂರ್ತಿ ಸ್ಥಾಪಿಸಬೇಕು ಎಂದು ತೀರ್ಮಾನದ ನಂತರ, ‌ ಮತ್ತೆ ಒಂದುವರೇ ವರ್ಷ ಸ್ಥಳಕ್ಕಾಗಿ ಹೋರಾಟ ನಡೆದವು. ಬಳಿಕ ನಮ್ಮ ತಂದೆಯವರು ಮುಂದಾಳತ್ವದಲ್ಲಿ ಹುಬ್ಬಳ್ಳಿಯ ಕೇಂದ್ರೀಯ ಸ್ಥಳವಾದ ಇಲ್ಲಿ ಮೂರ್ತಿ ಸ್ಥಾಪನೆ ಮಾಡಿದರು ಎಂದು ಮೂರ್ತಿ ಸ್ಥಾಪನೆಗೆ ನಡೆದು ಬಂದ ದಾರಿಯನ್ನು ವಿವರಿಸಿದರು.

ಕಿತ್ತೂರು ಪ್ರಾಧಿಕಾರಕ್ಕೆ 50 ಕೋಟಿ ಕ್ರಿಯಾಯೋಜನೆ:

ಈಗ ಕಿತ್ತೂರ ರಾಣಿ ಚೆನ್ನಮ್ಮ ಉತ್ಸವ ಮಾಡುವ ಮಹತ್ತರ ಕಾರ್ಯ ನನ್ನ ಪಾಲಿಗೆ ಬಂದಿದೆ. 2011ರಲ್ಲಿ ನಾನು ಉಸ್ತುವಾರಿ ಸಚಿವನಿದ್ದಾಗ ಕಿತ್ತೂರ ಪ್ರಾಧಿಕಾರ ಮಾಡಿ ಅವತ್ತು ಎಂಟು ಕೋಟಿ ರೂ. ಬಿಡುಗಡೆಗೊಳಿಸಿ ಆ ಕೆಲಸ ಪ್ರಾರಂಭಿಸಲಾಗಿತ್ತು. ಈ ವರ್ಷ 50 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ಕೊಟ್ಟಿದೆ ಹಣವನ್ನು ಸಹ ಬಿಡುಗಡೆ ಮಾಡುತ್ತಿದ್ದೇವೆ. ಬರುವ ದಿನಗಳಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಮತ್ತು ಸಂಗೋಳಿ ರಾಯಣ್ಣನ ಎಲ್ಲ ಸೂತ್ರಗಳನ್ನು ಬಿಜೆಪಿ ಸರ್ಕಾರ ಈಡೇರಿಸುತ್ತೆ ಎಂದು ಹೇಳಿದರು.

Related Articles

Leave a Reply

Your email address will not be published.

Back to top button