Uncategorized

ಗ್ರಾಮ ಪಂಚಾಯತ್ ಸಭೆಯಲ್ಲಿ ಮಾರಾಮಾರಿ

ಉಡುಪಿ: ಜಿಲ್ಲೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮ ಸಭೆಯಲ್ಲಿ ಹೊಡೆದಾಟ ನಡೆದಿದೆ. ಎರಡು ದಿನದ ಹಿಂದೆ ನಡೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.

ಕುಡಿಯುವ ನೀರಿನ ಪೈಪ್ಲೈನ್ ಸಂಪರ್ಕಕ್ಕೆ ನಡೆದ ಮಾತುಕತೆ ಕೈ ಕೈ ಮಿಲಾಯಿಸಿ ಪೊಲೀಸರ ಮಧ್ಯಪ್ರವೇಶದ ತನಕ ಮುಂದುವರೆದಿದೆ.

ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡ್ಲಿ ವಾರ್ಡ್ ನ ಪೂಜಾ ಎಂಬವರ ಮನೆಗೆ ನೀರಿನ ಪೈಪ್ ಲೈನ್ ಅಳವಡಿಸಲು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಸುಜಿತ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದರು. ಜಮೀನಿನ ತಕರಾರು ಇರುವುದರಿಂದ ವಾಟರ್ ಕನೆಕ್ಷನ್ ಸಾಧ್ಯವಿಲ್ಲ ಎಂದು ಗ್ರಾಮ ಸಭೆಯಲ್ಲಿವಪಟ್ಟು ಹಿಡಿದಿದ್ದರು. 94c ಅರ್ಜಿ ಇರುವುದರಿಂದ ಕುಡಿಯುವ ನೀರಿನ ಸಂಪರ್ಕಕ್ಕೆ ತಡೆ ಒಡ್ಡಬಾರದು ಎಂದು ಪಂಚಾಯತ್ ತೀರ್ಮಾನ ತೆಗದುಕೊಂಡಿದೆ. ಗ್ರಾಮಸ್ಥರು, ಶಿರ್ಲಾಲು ಗ್ರಾಮಪಂಚಾಯತ್ ನ ಅಧ್ಯಕ್ಷರು ಸದಸ್ಯರು ಸಮ್ಮತಿ ಸೂಚಿಸಿದ್ದರು.

ಪಂಚಾಯತ್ ನಿರ್ಣಯವನ್ನು ಕಾಂಗ್ರೆಸ್ ನ ಮುಂಡ್ಲಿ ವಾರ್ಡಿನ ಸದಸ್ಯ ಸುಜಿತ್ ಶೆಟ್ಟಿ ಮಾತ್ರ ವಿರೋಧಿಸಿದ್ದರು. ಪೂಜಾ ಪೂಜಾರ್ತಿ ಮತ್ತು ಸುಜಿತ್ ಶೆಟ್ಟಿ ಕಡೆಯವರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗಳ ಮುಂದುವರೆದು ಇತ್ತಂಡಗಳು ಸಮರಕ್ಕೆ ಇಳಿದವು. ಎಳೆದಾಟ ತಳ್ಳಾಟ ಹೊಡೆದಾಟದಲ್ಲಿ ಭಾಗಿಯಾದವರ ಬಟ್ಟೆಗಳು ಹರಿದಿವೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಐವರ ಮೇಲೆ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published.

Back to top button