Uncategorized
ಪ್ರಧಾನಿ ಮೋದಿ ಭೇಟಿಯಾದ ಪಂಜಾಬ್ ಸಿಎಂ; ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಮನವಿ
ನವದೆಹಲಿ: ಚರಣ್ ಜಿತ್ ಸಿಂಗ್ ಚನ್ನಿ ಪಂಜಾಬ್ ಸಿಎಂ ಗಾದಿ ಹಿಡಿದ ಮೇಲೆ ಪ್ರಥಮ ಬಾರಿಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದು, ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುಂತೆ ಮನವಿ ಮಾಡಿದ್ದಾರೆ.
ಭೇಟಿಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಒಂದು ವರ್ಷದಿಂದಲೂ ವಿವಾದಾತ್ಮಕ ಕಾಯ್ದೆ ವಿರುದ್ಧ ರೈತರು ಪ್ರತಿಭಟಿಸುತ್ತಿದ್ದಾರೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಸಾವಿರಾರು ರೈತರು ಹೋರಾಟ ತೀವ್ರಗೊಳಿಸಿದ್ದಾರೆ. ರಾಜ್ಯದಲ್ಲಿ ಕೃಷಿಯು ಪ್ರಮುಖ ಆದಾಯದ ಮೂಲವಾಗಿದ್ದು. ರೈತರಿಗೆ ಮಾರಕವಾಗುವ ಯಾವುದೇ ಕಾಯ್ದೆಗಳು ಬೇಡ. ಭತ್ತ ಸಂಗ್ರಹಣೆ ಮುಂದೂಡಿಕೆ ನಿರ್ಧಾರ ಹಿಂಪಡೆಯಬೇಕು. ರೈತರಿಗೆ ಸೂಕ್ತ ಪರಿಹಾರ ಲಭಿಸುವಂತೆ ನೆರವಾಗಬೇಕು. ಕೋವಿಡ್ ಕಾರಣದಿಂದ ಮುಚ್ಚಲಾಗಿರುವ ಕರ್ತಾರ್ ಪುರ್ ಕಾರಿಡಾರ್ ಮತ್ತೆ ತೆರೆಯಬೇಕು ಎಂದು ಪ್ರಧಾನಿಯವರನ್ನು ಕೇಳಿಕೊಂಡಿರುವುದಾಗಿ ತಿಳಿಸಿದ್ದಾರೆ.