Uncategorized

ಸೆರೆಬ್ರಲ್ ಪಾಲ್ಸಿ ರೋಗ್ ಯಂತ್ರ ಆವಿಷ್ಕಾರ: ಧಾರವಾಡ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಸಾಧನೆ

ಧಾರವಾಡ: ಸೆರೆಬ್ರಲ್ ಪಾಲ್ಸಿ ಎಂಬ ರೋಗ ಇದು ಇತ್ತೀಚೆಗೆ ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ರೋಗವಾಗಿದೆ. ಇದನ್ನು ಸಾಮಾನ್ಯರು ಪತ್ತೆ ಹಚ್ಚುವುದು ತುಂಬಾನೇ ಕಷ್ಟ. ಇದರ ಕುರಿತು ವೈದ್ಯರು ಭೌತಿಕವಾಗಿ ಪರೀಕ್ಷೆ ನಡೆಸಿ ನಂತರ ಹೌದೋ ಅಲ್ವೋ ಎಂಬ ತೀರ್ಮಾನಕ್ಕೆ ಬರುತ್ತಾರೆ. ಆದರೆ ಈ ಎಲ್ಲ ಕಷ್ಟಗಳಿಗೆ ಈಗ ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ರೋಗ ಪತ್ತೆ ಹಚ್ಚಲು ಇನ್ನಷ್ಟು ಸರಳವಾಗಿಸಿದ್ದಾರೆ. ಈ ರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸಲು ನೂತನ ಯಂತ್ರವೊಂದನ್ನು ಕಂಡು ಹಿಡಿದಿದ್ದು, ವೈದ್ಯರಿಗೂ ಹಾಗೂ ಮಕ್ಕಳ ಪೋಷಕರಿಗೂ ಸಹಾಕಾರಿಯಾಗಲಿದೆ.

ಸೆರೆಬ್ರಲ್ ಪಾಲ್ಸಿ ರೋಗದ ಲಕ್ಷಣಗಳು…

ಹೆಚ್ಚಾಗಿ ಚಿಕ್ಕಮಕ್ಕಳಲ್ಲಿ ಕಂಡು ಬರುವ ಸೆರೆಬ್ರಲ್ ಪಾಲ್ಸಿ ಎನ್ನುವ ರೋಗ ಪೋಷಕರಲ್ಲಿ ಸಾಕಷ್ಟು ಆತಂಕ ಮೂಡಿಸುತ್ತಿದೆ. ರೋಗದಿಂದ ಬಳಲುವ ಮಕ್ಕಳಿಗೆ ದೈಹಿಕ ವ್ಯಾಯಾಮ ಮಾಡಿಸೋದಂತೂ ಮಕ್ಕಳ ಪೋಷಕರಿಗೆ ದೊಡ್ಡ ಸವಾಲವ ಆಗಿತ್ತು. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಸರಳವಾಗಿ ಮಾಡಲು ಧಾರವಾಡದ ಎಸ್​ಡಿಎಂ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್‌ನ ಮುಖ್ಯಸ್ಥ ಡಾ.ಸತೀಶ್ ಭೈರಣ್ಣವರ್ ಹೊಸ ಯಂತ್ರವೊಂದನ್ನು ಸಂಶೋಧಿಸಿದ್ದಾರೆ. ಮಕ್ಕಳ ಜನನದ ಸಮಯದಲ್ಲಿ ಹಲವು ಕಾರಣಗಳಿಂದ ವಿಕಲಚೇತನ ಹಾಗೂ ಬುದ್ದಿ ಬೆಳವಣಿಗೆ ಕುಂಠಿತವಾಗಿರುತ್ತವೆ. ಇಂರಹ ಮಕ್ಕಳು ಬೆಳೆದಂತೆ ನಡೆಯುವಲ್ಲಿ, ಇನ್ನಾವುದೇ ಸಂದರ್ಭದಲ್ಲಿ ಓಡಾಟದ ವಿಧಾನ ಸೇರಿದಂತೆ ಅನೇಕ ವರ್ತನೆಗಳಿಂದ ಅವರಲ್ಲಿನ ದೋಷಗಳು ಕಂಡುಬರುತ್ತವೆ. ಇದನ್ನು ಸೆರೆಬ್ರಲ್ ಪಾಲ್ಸಿ ರೋಗ ಗುರುತ್ತಿಸಲಾಗುತ್ತದೆ. ಅಂತಹ ಮಕ್ಕಳಿಗೆ ಬಂದಿರುವ ರೋಗವನ್ನು ಈ ಮೊದಲಿ ವೈದ್ಯರು ಭೌತಿಕವಾಗಿಯೇ ಪತ್ತೆ ಹಚ್ಚಬೇಕಿತ್ತು. ಅದರೆ ಈಗ ಇದಕ್ಕೆ ಎಸ್‌ಡಿಎಂ ಸಂಸ್ಥೆಯಲ್ಲಿರುವ ಕ್ರಾಫ್ಟಿಂಗ್ ಟೆಕ್ನಾಲಜಿಸ್ ತಂಡವು ಟ್ರೆಡ್ ಮಿಲ್ ಆಧಾರಿತ ಫುಟ್ ಪ್ರೆಷರ್ ಅನಲೈಜರ್ ಎಂಬ ತಂತ್ರಜ್ಞಾನವನ್ನು ಸಿದ್ಧಪಡಿಸಿದ್ದಾರೆ.

ಮಕ್ಕಳ ನಡಿಗೆ ಹಾಗೂ ದೈಹಿಕ ಬದಲಾವಣೆ ಗುರುತ್ತಿಸಲು ಸಹಕಾರಿ:

ಚಿಕ್ಕ ಮಕ್ಕಳ ಪಾದದ ನಡುಗೆಯಲ್ಲಿನ ಬದಲಾವಣೆಯನ್ನು ಯಂತ್ರಕ್ಕೆ ಅಳವಡಿಸಲಾದ ಸ್ಕ್ರೀನ್‌ನಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದ್ದ, ಜೊತೆಗೆ ಈ ತಂತ್ರಜ್ಞಾನದ ಮೂಲಕ ಮಕ್ಕಳ ಪಾದದ ಒತ್ತಡದ ಮಾಹಿತಿಯನ್ನು ಸ್ವಯಂಚಾಲಿತವಾಗಿ ವೈದ್ಯರಿಗೆ ಕಳುಹಿಸಲಾಗುತ್ತದೆ. ಹೀಗೆ ವೈದ್ಯರು ಯಂತ್ರದ ಮಾಹಿತಿ ಆಧಾರದ ಮೇಲೆ ಚಿಕಿತ್ಸೆ ಮಾಡಲು ಸಹಾಯಕಾರಿಯಾಗಿದೆ. ಇನ್ನೂ ಮಕ್ಕಳು ಟ್ರಡ್ ಮಿಲ್‌ನ ಫುಟ್ ಪ್ರೆಷರ್ ಅನಲೈಜರ್​ನಲ್ಲಿ ಮಕ್ಕಳು ವಾಕ್ ಮಾಡಿಸುವಾಗ ಮಕ್ಕಳ ಗಮನಸೆಳೆಯಲು ಸ್ಕ್ರೀನ್ ಮೇಲೆ ಆಟಗಳನ್ನು ಆಡಬಹುದಾಗಿದೆ. ಜೊತೆಗೆ ಇದು ಮಕ್ಕಳ ಪೊಷಕರಿಗೂ ಕೊಂಚ ರೀಲಿಫ್ ನೀಡಿದೆ. ಹಟ ಮಾಡು ಮಕ್ಕಳಿಗೆ ಸ್ಕ್ರನ್ ಆಟಗಳನ್ನು ಹಚ್ಚಿಕೊಟ್ಟು ಮಕ್ಕಳನ್ನು ಟ್ರೆಡ್ ಮಿಲ್ ಮೇಲೆ ವಾಕ ಮಾಡಿಸಲು ಇದು ಇನ್ನಷ್ಟು ಸುಲುಭವಾಗಿದ್ದು, ಮಕ್ಕಳಿಗೂ ಮನರಂಜನೆಯ ಜೊತೆಗೆ ಉತ್ತಮ ದೈಹಿಕ ವ್ಯಾಯಾಮ ಆಗುತ್ತದೆ.

ಇನ್ನೂ ಈ ಕುರಿತು ಮಾತನಾಡಿದ ಡಾ. ಸತೀಶ್ ಭೈರಣ್ಣನವರ್‌ ಯಂತ್ರದ ಪೇಟೆಂಟ್‌ಗಾಗಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದ್ದು, ಅನುಮತಿ ಸಿಕ್ಕ ಬಳಿಕ ಮಾರುಕಟ್ಟೆಗೆ ಬಿಡುಗಡೆ ಬಿಡಲಾಗುವುದು. ಈ ಯಂತ್ರದಿಂದ ರೋಗಿಗಳ ಪೋಷಕರ ಜೊತೆಗೆ ಚಿಕಿತ್ಸೆ ನೀಡುವ ವೈದ್ಯರಿಗೂ ಸಾಕಷ್ಟು ಅನುಕೂಲವಾಗುತ್ತದೆ. ಅತಿ ಕಡಿಮೆ ವೆಚ್ಚದಲ್ಲಿ ಇದನ್ನು ಮನೆಯಲ್ಲಿ ಇಟ್ಟುಕೊಳ್ಳಹುದಾಗಿದೆ‌. ಅಲ್ಲದೆ ಈ ಯಂತ್ರದ ಬೆಲೆ ಟ್ರೆಡ್ ಮಿಲ್ ಜೊತೆಗೆ 50 ಸಾವಿರ ಆಸುಪಾಸಾಗಲಿದ್ದು, ಮನೆಯಲ್ಲಿ ಟ್ರೆಡ್ ಮಿಲ್ ಹೊಂದಿದವರಿಗೆ ಕೇವಲ 25 ಸಾವಿರ ರೂಪಾಯಿ ಸ್ಕ್ರೀನ್ ಹಾಗೂ ಪುಟ್ಟ ಪ್ರೆಷರ್ ಖರೀದಿಸಿದ್ದಾರೆ ಸಾಕು ಎನ್ನುತ್ತಾರೆ ಸಂಶೋಧಕರು.

ಒಟ್ಟಿನಲ್ಲಿ‌ ಇಷ್ಟುದಿನ ಮಕ್ಕಳಲಿ‌ ಕಾಣಿಸಿಕೊಳಗಳುತ್ತಿದ್ದ ಸೆರೆಬ್ರೆಲ್‌ ಪಾಲ್ಸಿ ರೋಗ ಪತ್ತೆ ಹಾಗೂ ಚಿಕಿತ್ಸೆಗೆ ವೈದ್ಯರಿಗೆ ಕೊಂಚ ಕಷ್ಟವಾಗಿತ್ತು. ಆದರೆ ಈಗ ಧಾರವಾಡ ಎಸ್ ಡಿಎಂ ಮಾಹಾವಿದ್ಯಾಲಯದ ಅವಿಷ್ಕಾರದಿಂದ ಇದು ಸರಳವಾಗುವ ಸಾಧ್ಯತೆ ಹೆಚ್ಚಿದ್ದು, ಚಿಕ್ಕಮಕ್ಕಳ ಸೆರೆಬ್ರಲ್ ಪಾಲ್ಸಿ ರೋಗ ತಡೆಯಲು ಒಂದು ಒಳ್ಳೆಯ ಸಾಧನವೆಂದು ಹೇಳಲಾಗುತ್ತಿದೆ.‌

Related Articles

Leave a Reply

Your email address will not be published.

Back to top button