Uncategorized

ಪಕ್ಷಾಂತರ ಮಾಡಿದ್ದ ನಾಲ್ವರು ಪುರಸಭೆ ಸದಸ್ಯರ ಸದಸ್ಯತ್ವ ರದ್ದು

ಬೆಳಗಾವಿ: ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಚಿಕ್ಕೋಡಿ ತಾಲೂಕಿನ ಸದಲಗಾ ಪುರಸಭೆಯ ನಾಲ್ವರು ಸದಸ್ಯರ ಸದಸ್ಯತ್ವ ರದ್ದು ಮಾಡಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಆದೇಶವನ್ನು ಹೊರಡಿಸಿದ್ದಾರೆ ಎಂದು ಬಿಜೆಪಿ ಸದಸ್ಯ ಬಸವರಾಜ ಹಣಬರ ತಿಳಿಸಿದ್ದಾರೆ.

ಸದಲಗಾದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಾರ್ಡ ನಂ.12 ರ ಸದಸ್ಯ ಸುರೇಶ ಉದಗಾವೆ,ವಾರ್ಡ ನಂ.5 ರ ಸದಸ್ಯ ಮೆಹಬೂಬ್ ಕಾಳೆ,ವಾರ್ಡ ನಂಬರ 15 ರ ಸದಸ್ಯ ನೌಸಾದ ಮುಜಾವರ ಹಾಗೂ ವಾರ್ಡ ನಂಬರ 6 ರ ಸದಸ್ಯೆ ಸುಜಾತ ಕುಂಬಾರ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಜಿಲ್ಲಾಧಿಕಾರಿಗಳು ಆದೇಶವನ್ನು ಹೋರಡಿಸಿದ್ದಾರೆ.

ಈ ಸದಸ್ಯರು ಬಿಜೆಪಿಯಿಂದ ಗೆದ್ದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದರು‌‌.ಈ ಹಿನ್ನೆಲೆಯಲ್ಲಿ ಈ ಸದಸ್ಯರ ಸದಸ್ಯತ್ವ ರದ್ದತಿಗೆ ಆಗ್ರಹಿಸಿ, ಸಾಕ್ಷಾಧಾರಗಳೊಂದಿಗೆ ಬಿಜೆಪಿ ಸದಸ್ಯರಾದ ಆನಂದ ಪಾಟೀಲ ಹಾಗೂ ಹೇಮಂತ ಶಿಂಗೆ ಅವರು ದೂರು ದಾಖಿಲಿಸಿದ್ದರು. ಜಿಲ್ಲಾಧಿಕಾರಿ ಆದೇಶದಿಂದಾಗಿ ಕಾಂಗ್ರೆಸ್ ಸದಸ್ಯರಿಗೆ ಜನಪ್ರತಿನಿಧಿಗಳಿಗೆ ಹೀನಾಯವಾಗಿ ಮುಖಭಂಗವಾಗಿದೆ. ಇದರಿಂದ ಬಿಜೆಪಿಗೆ ಮತ್ತಷ್ಟು ಬಲಬಂದಿದೆ. ಈ ಕಾನೂನು ಹೋರಾಟದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ,ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ,ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ರಾಜೇಶ ನೇರ್ಲಿ,ಸಂಜಯ ಪಾಟೀಲ, ಪ್ರಕಾಶ ಪಾಟೀಲ ಅವರು ಸಹಕರಿಸಿದ್ದಾರೆ ಎಂದು ಬಸವರಾಜ ಹಣಬರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆನಂದ ಪಾಟೀಲ, ಅಭಿನಂದನ ಪಾಟೀಲ, ಅಭಿಷೇಕ ಪಾಟೀಲ, ಧರೆಪ್ಪಾ ಹವಾಲ್ದಾರ್, ಚೇತನ ಪಾಟೀಲ, ಅನಿರುದ್ದ ಪಾಟೀಲ, ಬಾಳಗೌಡ ಪಾಟೀಲ, ಪ್ರಶಾಂತ ಕರಂಗಳೆ, ರಾಜು ಅಮೃತಸಮ್ಮನವರ, ಚಿದಾನಂದ ಕಮತೆ, ಭರತ ಬೋರಗಾಂವೆ, ಶಿವಚಂದ್ರ ಯಕ್ಕುಂಡೆ, ಚಿದಾನಂದ ಸಮಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Related Articles

Leave a Reply

Your email address will not be published.

Back to top button