Uncategorized

ಈ ಜನ್ಮದಲ್ಲಿ ಮತ್ತೆ ಕಾಂಗ್ರೆಸ್ ಸೇರಲಾರೆ: ಭೈರತಿ

ದಾವಣಗೆರೆ: ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಈ ಜನ್ಮದಲ್ಲಿ ಮತ್ತೆ ಕಾಂಗ್ರೆಸ್ ಸೇರೋಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ‌.

ಮುಂಬೈ ಮಿತ್ರ ಮಂಡಳಿ ಸದಸ್ಯರು ಮತ್ತೆ ಕಾಂಗ್ರೆಸ್ ಗೆ ಸೇರ್ತಾರ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಮತ್ತೆ ಕಾಂಗ್ರೆಸ್‌ ಸೇರುವುದು ಈ ಜನುಮದಲ್ಲಿ ಸಾಧ್ಯವಿಲ್ಲ. ನಾವು ಬಿಜೆಪಿ ತತ್ವ, ಸಿದ್ದಾಂತವನ್ನ ಒಪ್ಪಿ ಅಪ್ಪಿಕೊಂಡು ಬಂದಿದ್ದೇವೆ. ಮತ್ತೆ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು

ಸೋಲುವ ಭೀತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಹಿಂದ ಹೋರಾಟ ಆರಂಭಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 5 ವರ್ಷ ಇದ್ರೂ ಆವಾಗ ಯಾಕೆ ಅಹಿಂದಾಕ್ಕೆ ಗಮನ ಕೊಟ್ಟಿಲ್ಲ. ಅಹಿಂದ ವರ್ಗಕ್ಕೆ ಏನು ಕೊಟ್ಟಿಲ್ಲ. ನಾವು ಅಹಿಂದಾದಲ್ಲೇ ಇದ್ದೇವೆ ನಾವು ಅಹಿಂದಾ ಮಾಡ್ತೀವಿ ಎಂದು ತಿರುಗೇಟು ನೀಡಿದರು‌.

ಸಿದ್ದರಾಮಯ್ಯ ಅಹಿಂದಾನಾದ್ರೂ ಸ್ಟಾರ್ಟ್ ಮಾಡ್ಲಿ ಏನಾದ್ರೂ ಮಾಡ್ಲಿ. ಜನರು ಮಾತ್ರ ಬಿಜೆಪಿ ಪಕ್ಷದ ಪರವಾಗಿದ್ದಾರೆ ಎಂದು ಭೈರತಿ ಬಸವರಾಜ್ ತಿಳಿಸಿದರು.

Related Articles

Leave a Reply

Your email address will not be published.

Back to top button