ನವಲಗುಂದದಲ್ಲಿ ಅಣ್ಣನಿಂದ ತಂಗಿಯ ಕೊಲೆ: ಕೊಲೆಗೆ ಕಾರಣವಾಯ್ತಾ ತಂಗಿಯ ಎರಡನೇ ಮದುವೆ..?.
ಧಾರವಾಡ: ಗಂಡನ ಸಾವಿನ ಬಳಿಕ ತವರು ಮನೆ ಸೇರಿ ನಂತರ ಅಣ್ಣನ ವಿರೋಧ ನಡುವೆಯು ಎರಡನೇ ಮದುವೆಯಾಗಿದ್ದ ಸ್ವಂತ ತಂಗಿಯನ್ನೇ, ಅಣ್ಣ ಬರ್ಬವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಕಳೆದ ದಿನ ನಡೆದಿದೆ.
ಶಶಿಕಲಾ ಅಣ್ಣನಿಂದ ಹತ್ಯೆಯಾದ ಮಹಿಳಾಯಾಗಿದ್ದಾಳೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅಣ್ಣ ವಿರೋಧ ಮಧ್ಯೆ ಎರಡನೇ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ ತಂಗಿಯ ಎರಡನೇ ಮದುವೆ ನಿರ್ಧಾರದಿಂದ ಕೋಪದಲ್ಲಿದ್ದ ಸಹೋದರ ಮಹಾಂತೇಶ ಶರಣಪ್ಪನವರ, ತನ್ನ ಸ್ವಂತ ತಂಗಿಯ ಕಣ್ಣಿಗೆ ಕಾರದ ಪುಡಿ ಏರಚಿ ಹರಿತವಾದ ಆಯುಧದಿಂದ ದಾಳೆ ಮಾಡಿ ಹತ್ಯೆ ಮಾಡಿದ್ದಾನೆ.
ಕೊಲೆ ಮಾಡಿದ ಸಹೋದರ ಮಾಹಾಂತೇಶ ಶರಣಪ್ಪನವರ ಹತ್ಯೆಗೆ ಬಳಿಸಿದ ಆಯುಧ ಹಿಡಿದು ಕುಂದಗೋಳ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದ್ದು, ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನವಲಗುಂದ ಠಾಣೆಯ ಪೊಲೀಸರು ಶಶಿಕಲಾ ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ನವಲಗುಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ….
ಹತ್ಯೆಯಾದ ಶಶಿಕಲಾ ಅವರನ್ನು ಕಳೆದ ಆರು ತಿಂಗಳಗಳ ಹಿಂದೆ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಗ್ರಾಮಕ್ಕೆ ಮದುವೆ ಮಾಡಿಕೋಡಲಾಗಿತ್ತು. ಹೊಸ ಜೀವನದ ಕನಸ್ಸಿನೊಂದಿಗೆ ಅರಳಿಕಟ್ಟಿ ಗ್ರಾಮಕ್ಕೆ ಶಶಿಕಲಾ ಅವರು ತೆರಳಿದರು. ಆದರೆ ಕೆಲವೇ ತಿಂಗಳ ಬಳಿಕ ಶಶಿಕಲಾ ಅವರ ಪತಿ ಸಾವನಪ್ಪಿರುತ್ತಾರೆ. ನಂತರ ಗಂಡನ ಸಾವಿನ ನೋವಿನಿಂದ ಬೇಸತ್ತ ಶಶಿಕಲಾ ಅವರು, ನೋವು ಮರೆಯಲು ಎಂದು ತವರು ಮನೆಯಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಶಶಿಕಲಾ ಅವರು ಪಟ್ಟಣದ ಪುರಾತನ ವೆಂಕಟೇಶ್ವರ ದೇವಸ್ಥಾನದ ಬಳಿ ನಿವಾಸಿಯಾದ ರವಿ ಪಟಾದ ಎಂಬುವವರ ಜೊತೆಗೆ ಮದುವೆಯಾಗಲು ನಿರ್ಧಾರ ಮಾಡುತ್ತಾರೆ. ಇದನ್ನು ಸಹೋದರನಿಗೆ ತಿಳಿಸಿರುತ್ತಾರೆ ಎಂದು ಹೇಳಲಾಗುತ್ತಿದೆ.
ಆದರೆ ತಂಗಿಯ ಎರಡನೇ ಮದುವೆ ನಿರ್ಧಾರಕ್ಕೆ ಅಣ್ಣ ಮಹಾಂತೇಶ ವಿರೋಧ ವ್ಯಕ್ತಪಡಿಸಿದ್ದು, ವಿರೋಧ ನಡುವೆಯೂ ಶಶಿಕಲಾ ಎಂಟು ದಿನಗಳ ಹಿಂದೆಯಷ್ಟೇ ರವಿ ಪಟಾದ ಎಂಬುವವರನ್ನು ವಿವಾಹವಾಗಿದರು. ಮೊದಲೇ ಕೋಪ್ಪದಲ್ಲಿದ್ದ ಸೋದರ, ಮದುವೆಯ ನಂತರ ಮತ್ತಷ್ಟು ಕೋಪ್ಪಗೊಂಡು ಕಳೆದ ದಿನ ತನ್ನ ಸ್ವಂತ ತಂಗಿಯನ್ನು ಹತ್ಯೆ ಮಾಡಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.