ತೂಗುಸೇತುವೆ ಹರಿಕಾರ ಗಿರೀಶ್ ಭಾರಧ್ವಜ್ಗೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ
ಉಡುಪಿ : ಕೋಟತಟ್ಟು ಗ್ರಾಮ ಪಂಚಾಯತ್, ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ವತಿಯಿಂದ ನೀಡಲಾಗುವ ಈ ಬಾರಿಯ ಪ್ರತಿಷ್ಠಿತ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ತೂಗುಸೇತುವೆ ಹರಿಕಾರ ಗಿರೀಶ್ ಭಾರಧ್ವಜ್ ಅವರಿಗೆ ನೀಡಿ ಗೌರವಿಸಲಾಯಿತು.
ಕೋಟ ಕಾರಂತ ಥೀಂ ಪಾರ್ಕ್ ನಲ್ಲಿ ಆಯೋಜಿಸಲಾದ ಕಾರಂತ ಹುಟ್ಟೂರ ಸಂಭ್ರಮ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಿರೀಶ್ ಭಾರಧ್ವಜ್, ಹಳ್ಳಿಗಳಲ್ಲಿ ಸಾಕಷ್ಟು ಪ್ರತಿಭೆಗಳು ಇರುತ್ತದೆ ಅದನ್ನು ಹೊರಗೆಳೆಯಲು ನಾವುಗಳು ಪ್ರಯತ್ನಿಸಬೇಕು ಇದಕ್ಕೆ ಕಾರಂತರಂತವರು ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.
ಹಳ್ಳಿಗಳಲ್ಲಿ ಸಿಗುವ ಪ್ರೀತಿ ಮತ್ತೆ ಬೇರೆ ಭಾಗಗಳಲ್ಲಿ ಸಿಗಲು ಸಾಧ್ಯವಿಲ್ಲ ಅವುಗಳನ್ನು ನಾನು ನನ್ನ ಜೀವನದಲ್ಲಿ ಕಂಡಿದ್ದೇನೆ. ಕಾರಂತರ ಪ್ರತಿ ಕಾದಂಬರಿಯಲ್ಲಿ ಅರ್ಥಪೂರ್ಣ ಜೀವನದ ಕಲೆಗಳಿವೆ, ಕಾರಂತರ ಅನುಭವಗಳನ್ನು ತಮ್ಮ ಜೀವನದ ಕರ್ತವ್ಯದಲ್ಲಿ ಅಳವಡಿಸಿಕೊಂಡಿದ್ದಾರೆ ಈ ಎಲ್ಲಾ ಸಾಧನೆಗೆಳಿಗೆ ನನ್ನ ತಂದೆ ತಾಯಿ ಗುರುಗಳು ಮತ್ತು ಸಹದ್ಯೋಗಿಗಳು ಕಾರಣ ಎಂದರು.
ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಖಾತೆ ಸಚಿವ ಕೋಟ ಪೂಜಾರಿ ಉದ್ಘಾಟಿಸಿದರು.