Uncategorized

ಬಾಗಲಕೋಟೆ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ 10ನೇ ಪದವಿ ಪ್ರದಾನ ಸಮಾರಂಭ

ಬಾಗಲಕೋಟೆ: ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ 10ನೇ ಪದವಿ ಪ್ರದಾನ ಸಮಾರಂಭ ಅಕ್ಟೋಬರ್ 23ಕ್ಕೆ ನಡೆಯಲಿದ್ದು ಬಿಇ ಪದವಿ ಸ್ನಾತಕೋತ್ತರ ಪದವಿಯಲ್ಲಿ ರ‍್ಯಾಂಕ್ ಪಡೆದ 6 ವಿದ್ಯಾರ್ಥಿನೀಯರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಎಸ್ ಎಸ್ ಇಂಜಗೇರಿ ಹೇಳಿದರು.

ಬಾಗಲಕೋಟೆ ವಿದ್ಯಾಗಿರಿಯಲ್ಲಿರುವ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 20ರ ಶನಿವಾರ ಬೆಳಿಗ್ಗೆ 9-30ಕ್ಕೆ ಪದವಿ ಪ್ರದಾನ ಸಮಾರಂಭ ನಡೆಯಲಿದೆ. ಬವಿವಿ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದ್ದು 2007ರಲ್ಲಿ ಯುಜಿಸಿ, ವಿಟಿಯುಗಳಿಂದ ಶೈಕ್ಷಣಿಕ ಸ್ವಾಯತ್ತತೆ ಪಡೆದುಕೊಂಡಿದೆ. ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಿಂದ ಮಾನ್ಯತೆ ಪಡದುಕೊಂಡಿದೆ.

10ನೇ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷ ಹಾಗೂ ಶಾಸಕ ವೀರಣ್ಣ ಚರಂತಿಮಠ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮ್ಯಾನೇಜ್​ಮೆಂಟ್ ಅಕಾಡೆಮಿಯ ಹೆಚ್ ಎಎಲ್ ಜನರಲ್ ಮ್ಯಾನೇಜರ್ ಜಿ ಶ್ರೀಕಂಠ ಶರ್ಮ, ವಿಟಿಯು ಕುಲಸಚಿವ(ಆಡಳಿತ) ಎ ಎಸ್ ದೇಶಪಾಂಡೆ ಆಗಮಿಸಲಿದ್ದಾರೆ. ಬವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಅಥಣಿ, ಬವಿವಿ ತಾಂತ್ರಿಕ ಶಿಕ್ಷಣ ನಿರ್ದೇಶಕ ಆರ್ ಎನ್ ಹೆರಕಲ್ ವೇದಿಕೆಯಲ್ಲಿ ಉಪಸ್ಥಿತರಲಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ 20118-19ನೇ ಸಾಲಿನ ಪದವಿ ಪ್ರದಾನ ಸಮಾರಂಭ ಮಾಡಿರಲಿಲ್ಲ. ಇದೀಗ ಆಯೋಜಿಸಲಾಗಿದ್ದು ಒಟ್ಟು 10 ಇಂಜಿನಿಯರಿಂಗ್ ವಿಭಾಗಗಳಿಂದ 917ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನಡೆಯಲಿದೆ. ಒಟ್ಟು 38 ಬಿಇ ಪದವೀಧರರು ರ‍್ಯಾಂಕ್ ಪಡೆದುಕೊಂಡಿದ್ದು 30ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. 2018-19ನೇ ಸಾಲಿನಲ್ಲಿ ಬಿಇ, ಎಂಟೆಕ್ ಪದವಿ ಎಲ್ಲಾ ವಿಭಾಗಗಳಲ್ಲಿ ಗರಿಷ್ಠ ಸಿಜಿಪಿಎ ಗಳಿಸಿದ ಪೃಥ್ವಿ ಅಳಗೊಂಡ, ಪ್ರಾಚಿ ಪೊರವಾಲ, ಸುವರ್ಣಾ ಕೊಲ್ಹಾರ, ಅನ್ನಪೂರ್ಣ ಕಾಯಿ, ಮೇಘಾ ಕರಬಾಶೆಟ್ಟಿ ಮಂಜುಳಾ ಮಠಪತಿ ಪ್ರತಿಭಾವಂತ ವಿದ್ಯಾರ್ಥಿನೀಯರಿಗೆ ಚಿನ್ನದ ಪದಕ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.

ಇನ್ನು 2020-21 ನೇ ಸಾಲಿನ ಪದವಿ ಪ್ರದಾನ ಸಮಾರಂಭ ನವೆಂಬರ್​ 20ರಂದು ನಡೆಯಲಿದೆ ಎಂದು ಇದೇ ವೇಳೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪರೀಕ್ಷಾ ನಿಯಂತ್ರಣಾಧಿಕಾರಿ ಕೆ ಚಂದ್ರಶೇಖರ್ ಹಾಗೂ ಕಾಲೇಜಿನ ಉಪನ್ಯಾಸಕರು ‌ಸಿಬ್ಬಂದಿ ಇದ್ದರು.

Related Articles

Leave a Reply

Your email address will not be published.

Back to top button