Uncategorized
Bandh: ಸರ್ಕಾರದ ನೀತಿ ವಿರೋಧಿಸಿ ಬಂಗಾರಪೇಟೆ, ಕೆಜಿಎಫ್ ತಾಲ್ಲೂಕು ಬಂದ್
ಕೋಲಾರ: ಕೆಜಿಎಫ್ ಎಸ್ ಪಿ ಕಛೇರಿ ಮತ್ತು ಡಿಎಆರ್ ಕಛೇರಿಯನ್ನು ಮುಚ್ಚುವ ಸರ್ಕಾರದ ಕ್ರಮವನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಕೆಜಿಎಫ್ ಮತ್ತು ಬಂಗಾರಪೇಟೆ ಬಂದ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಅಂಗಡಿ ಹೋಟೆಲ್ ಇತರ ವಾಣಿಜ್ಯ ಸಂಸ್ಥೆಗಳು ಮುಚ್ಚಲಾಗಿದ್ದು ಆಟೋರಿಕ್ಷಾ ಮತ್ತು ಬಸ್ ಸಂಚಾರ ಸ್ತಬ್ಧಗೊಂಡಿದೆ. ಸಾರ್ವಜನಿಕ ಉದ್ಯಮವಾದ ಬೆಮಲ್ ನೌಕರರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಂದ್ ಕಾರಣ ರಸ್ತೆಗಳು ಬಿಕೋ ಎನ್ನುತ್ತಿವೆ.
ವಿವಿಧ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಎಸ್ ಪಿ ಕಛೇರಿಯನ್ನು ಮುಚ್ಚಬಾರದೆಂದು ಒತ್ತಾಯಿಸಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ಬಂದ್ ಹಿನ್ನಲೆಯಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ