Uncategorized

Robbers Arrest: ಬಾಗಲಕೋಟೆಯಲ್ಲಿ ಅಂತರ್ ರಾಜ್ಯ ಕಳ್ಳರ ಬಂಧನ

ಬಾಗಲಕೋಟೆ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಾಗಲಕೋಟೆ ಪೊಲೀಸರು ಯಶಸ್ವಿಯಾಗಿದ್ದು ಬರೋಬ್ಬರಿ 10 ಲಕ್ಷ 50 ಸಾವಿರ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ವೃತ್ತದಲ್ಲಿ ದಾಖಲಾದ ಸ್ವತ್ತಿನ ಪ್ರಕರಣಗಳಲ್ಲಿನ ಆರೋಪಿತರು ಮತ್ತು ಕಳ್ಳತನವಾದ ಮಾಲು ಪತ್ತೆ ಕುರಿತು ಸಿಪಿಐ ರಮೇಶ ಹಾನಾಪೂರ ನೇತೃತ್ವದಲ್ಲಿ ಅ.21 ರಂದು ಬಾದಾಮಿ ವೃತ್ತದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಸೋಲಾಪೂರದ ಸುರೇಶ ಯಲ್ಲಪ್ಪ ಶಿವಪೂರ(40) ಹಾಗೂ ಬಸಮ್ಮ ಗಂಡ ಸುರೇಶ ಶಿವಮರೆ(35) ಬಂಧಿಸಲಾಗಿದೆ.

ವಿಚಾರಣೆ ವೇಳೆ ತಾವು ಮನೆ ಕಳ್ಳತನ ಮಾಡಲು ಬಂದಿದ್ದು, ಸುರೇಶ ಯಲ್ಲಪ್ಪ ಶಿವಪುರೆ ಈತನು ರಾತ್ರಿ ಮನೆ ಕಳ್ಳತನ ಮಾಡಿರುವುದಾಗಿ ಹಾಗೂ ಈ ದಿವಸವೂ ಸಹ ನಾನು ಹಾಗೂ ನನ್ನ ಹೆಂಡತಿ ಬಸಮ್ಮ ಇಬ್ಬರೂ ಯಾವುದಾದರೂ ಕೀಲಿ ಹಾಕಿದ ಮನೆ ನೋಡಿಕೊಂಡು ಬಾದಾಮಿ ಪಟ್ಟಣದಲ್ಲಿ ರಾತ್ರಿ ಕಳ್ಳತನ ಮಾಡಬೇಕೆಂದು ಬಂದಿದ್ದೆವು ಅಂತಾ ಹೇಳಿದ್ದರಿಂದ ಸುರೇಶ ಶಿವಪುರೆ ಈತನು ಬಾದಾಮಿ, ಗುಳೇದಗುಡ್ಡ ಠಾಣೆ ವ್ಯಾಪ್ತಿ ಗದ್ದನಕೇರಿ ಕ್ರಾಸ್ ನಲ್ಲಿ ಮನೆ ಕಳ್ಳತನ ಮಾಡಿದ ಬಗ್ಗೆ ಖಚಿತವಾಗಿದ್ದು ಸದರಿಯವರಿಬ್ಬರಿಗೆ ಬಾದಾಮಿ ಪೊಲೀಸ್ ಠಾಣೆಯ ಪ್ರಕರಣದಂತೆ ದಸ್ತಗೀರ ಮಾಡಿದ್ದು ಮತ್ತು ಸದರಿ ಆರೋಪಿತನ ಕಡೆಯಿಂದ ಬಾದಾಮಿ, ಗುಳೇದಗುಡ್ಡ ಮತ್ತು ಶಿರೂರ, ಗದ್ದನಕೇರಿ ಕ್ರಾಸ್ ಮತ್ತು ಬಾಗಲಕೋಟ ಹತ್ತಿರ ಒಟ್ಟು 6 ಪ್ರಕರಣಗಳಲ್ಲಿ ಕಳ್ಳತನ ಮಾಡಿದ 10 ಲಕ್ಷದ 50 ಸಾವಿರ ರೂ ಕಿಮ್ಮತ್ತಿನ 210 ಗ್ರಾಂ ಬಂಗಾರದ ಆಭರಣಗಳು, 15 ಸಾವಿರ ರೂ ಕಿಮ್ಮತ್ತಿನ 250 ಗ್ರಾಂ ಬೆಳ್ಳಿ ಆಭರಣಗಳನ್ನು ಮತ್ತು ಕಳ್ಳತನ ಮಾಡಲು ಉಪಯೋಗಿಸಿದ ಬೈಕ್​​ ನ್ನು ವಶಪಡಿಸಿಕೊಳ್ಳಲಾಗಿದೆ.

ಸದರಿ ಆರೋಪಿತನ ಮೇಲೆ ಈಗಾಗಲೇ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ದಾರವಾಡ, ಗದಗ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಯಲ್ಲಿ ಸುಮಾರು 46 ಪ್ರಕರಣಗಳು ದಾಖಲಾಗಿದ್ದು ಅಂತರರಾಜ್ಯ ಕಳ್ಳತನ ಮಾಡುವ ಸ್ವಭಾವದವನು ಇರುತ್ತಾನೆ. ಈ ಸಂದರ್ಭದಲ್ಲಿ ಸಿಪಿಐ ರಮೇಶ ಹಾನಾಪೂರ, ಪಿ.ಎಸ್.ಐ.ನೇತ್ರಾವತಿ ಪಾಟೀಲ, ಮತ್ತು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು. ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಪೊಲೀಸ್ ಸಿಬ್ಬಂದಿಗೆ ಅಭಿನಂದಿಸಿದ್ದಾರೆ.

Related Articles

Leave a Reply

Your email address will not be published.

Back to top button